ನ್ಯಾಟಿಂಗ್ಹ್ಯಾಮ್: ಈ ಸಲದ ವಿಶ್ವಕಪ್ನಲ್ಲಿ ವರುಣನ ಅಬ್ಬರ ಜೋರಾಗಿದ್ದು, ಇಂದು ನಡೆಯಬೇಕಾಗಿದ್ದ ಭಾರತ-ನ್ಯೂಜಿಲೆಂಡ್ ನಡುವಿನ ಮಹತ್ವದ ಪಂದ್ಯ ಕೂಡ ಮಳೆಗಾಹುತಿಯಾಗಿರುವ ಕಾರಣ, ಎರಡು ಪಂದ್ಯಗಳು ತಲಾ ಒಂದು ಒಂದು ಅಂಕ ಹಂಚಿಕೊಂಡಿವೆ.
ನಿನ್ನೆ ಸುರಿದ ಮಳೆಯಿಂದಾಗಿ ಮೈದಾನ ಸಜ್ಜುಗೊಂಡಿರಲಿಲ್ಲ. ಇಂದು ಸಹ ಪದೇ ಪದೇ ಮಳೆ ಸುರಿದ ಪರಿಣಾಮ ಪಂದ್ಯಕ್ಕೆ ಅಡಚಣೆ ಮಾಡಿತು. ಇನ್ನು ಅಂಪೈರ್ಗಳು ಮೈದಾನ ಪರಿಶೀಲನೆ ಮಾಡಿ, ಪಂದ್ಯ ರದ್ದುಗೊಳಿಸಿದ್ದು, ಭಾರತ ಮುಂದಿನ ಪಂದ್ಯವನ್ನ ಜೂನ್ 16ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ.
ಈಗಾಗಲೇ ಪಾಕಿಸ್ತಾನ ಹಾಗೂ ಶ್ರಿಲಂಕಾ ನಡುವಿನ ಪಂದ್ಯ,ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ-ಶ್ರೀಲಂಕಾ ತಂಡಗಳ ನಡುವಿನ ಪಂದ್ಯ ಮಳೆಗಾಹುತಿಯಾಗಿವೆ. ನ್ಯೂಜಿಲೆಂಡ್ ಈಗಾಗಲೇ ಶ್ರೀಲಂಕಾ,ಬಾಂಗ್ಲಾ ಹಾಗೂ ಆಫ್ಘಾನ್ ತಂಡಗಳ ವಿರುದ್ಧ ಗೆಲುವು ದಾಖಲು ಮಾಡಿದ್ದರೆ, ಭಾರತ ಬಲಿಷ್ಠ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ನಗೆ ಬೀರಿದೆ.