ನಾಟಿಂಗ್ಹ್ಯಾಮ್: ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಪಾಕಿಸ್ತಾನ ವಿರುದ್ಧ 14 ರನ್ಗಳಿಂದ ಸೋಲನುಭವಿಸಿದೆ.
349 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕರಾದ ಜೇಸನ್ ರಾಯ್ (8) ಹಾಗೂ ಜಾನಿ ಬೇರ್ಸ್ಟೋ (32) ಅಲ್ಪ ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಜೋ ರೂಟ್ ಭರ್ಜರಿ ಶತಕ ಸಿಡಿಸಿ ಗೆಲುವಿನತ್ತ ಕೊಂಡೊಯ್ದರು. 107 ರನ್ ಬಾರಿಸಿ ರೂಟ್ ಔಟಾದರು.
ನಂತರ ಬಂದ ಜಾಸ್ ಬಟ್ಲರ್ 103 ಬಾರಿಸುವ ಮೂಲಕ ಆಂಗ್ಲರ ಪಡೆಯಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಬಟ್ಲರ್ ಔಟಾಗುತ್ತಿದ್ದಂತೆ ಮೊರ್ಗನ್ ಪಡೆಯ ಗೆಲುವು ದೂರವಾಯಿತು. ನಂತರ ಕ್ರೀಸ್ಗೆ ಆಗಮಿಸಿದ ದಾಂಡಿಗರು, ತಂಡಕ್ಕೆ ಗೆಲುವು ತರುವಲ್ಲಿ ವಿಫಲರಾದರು.
ಗಮನಿಸಿ...! 2019-20ರ ಟೀಂ ಇಂಡಿಯಾದ ತವರಿನ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
ಇಬ್ಬರ ಶತಕದ ಹೊರತಾಗಿಯೂ ನಿಗದಿತ 50 ಓವರ್ನಲ್ಲಿ ಇಂಗ್ಲೆಂಡ್ 334 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ 14 ರನ್ಗಳಿಂದ ಸೋಲೊಪ್ಪಬೇಕಾಯಿತು.
-
11 ODI losses in a row, comprehensively beaten in their opening #CWC19 encounter, Pakistan bounce back with a brilliant win over England at Trent Bridge. 🔥
— Cricket World Cup (@cricketworldcup) June 3, 2019 " '="" class="align-text-top noRightClick twitterSection" data="
They have beaten the hosts – and tournament favourites – by 14 runs! pic.twitter.com/Pmz5Am6YdE
">11 ODI losses in a row, comprehensively beaten in their opening #CWC19 encounter, Pakistan bounce back with a brilliant win over England at Trent Bridge. 🔥
— Cricket World Cup (@cricketworldcup) June 3, 2019
They have beaten the hosts – and tournament favourites – by 14 runs! pic.twitter.com/Pmz5Am6YdE11 ODI losses in a row, comprehensively beaten in their opening #CWC19 encounter, Pakistan bounce back with a brilliant win over England at Trent Bridge. 🔥
— Cricket World Cup (@cricketworldcup) June 3, 2019
They have beaten the hosts – and tournament favourites – by 14 runs! pic.twitter.com/Pmz5Am6YdE
ಪಾಕಿಸ್ತಾನ ಪರ ವಹಾಬ್ ರಿಯಾಜ್ ಮೂರು ವಿಕೆಟ್ ಪಡೆದು ಮಿಂಚಿದರೆ ಮೊಹಮ್ಮದ್ ಅಮೀರ್ ಹಾಗೂ ಶದಬ್ ಖಾನ್ ತಲಾ ಎರಡು ವಿಕೆಟ್ ಹಂಚಿಕೊಂಡರು.
ವಿಶ್ವಕಪ್ನಲ್ಲಿ ಅಪರೂಪದ ದಾಖಲೆ ಬರೆದ ಪಾಕಿಸ್ತಾನ..!
ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ ಎರಡನೇ ಪಂದ್ಯ ಗೆದ್ದು ನಿಟ್ಟುಸಿರು ಬಿಟ್ಟಿತು. ಪ್ರಥಮ ಪಂದ್ಯ ಜಯಿಸಿದ್ದ ಆಂಗ್ಲರು ಎರಡನೇ ಪಂದ್ಯದಲ್ಲಿ ಮುಗ್ಗರಿಸಿದರು.