ದಕ್ಷಿಣ ಚೀನಾ: ಇಲ್ಲಿನ ಪ್ರಾಂತ್ಯವೊಂದರಲ್ಲಿ, ಭಾರತದಲ್ಲಿ ಕಂಡುಬಂದ ಕೊರೊನಾ ತಳಿ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಗುವಾಂಗ್ಝೌದಲ್ಲಿ 18 ಮತ್ತು ನೆರೆಯ ಫೋಶನ್‌ನಲ್ಲಿ ಎರಡು ಪ್ರಕರಣಗಳು ದೃಢಪಟ್ಟಿದೆ ಎಂದು ಗುವಾಂಗ್‌ಡಾಂಗ್ ಆರೋಗ್ಯ ಇಲಾಖೆ ತಿಳಿಸಿದೆ.
ಗುವಾಂಗ್ಝೌ ಜಿಲ್ಲೆಯ ಅತ್ಯಂತ ಹಾನಿಗೊಳಗಾದ ಪ್ರದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಸೋಮವಾರ ರಾತ್ರಿ 10 ಗಂಟೆಯಿಂದ ಪ್ರಾಂತ್ಯದಿಂದ ಹೊರಹೋಗಲು ಬಯಸುವ ಯಾರಾದರೂ ನಿರ್ಗಮಿಸುವ ಮೊದಲು 72 ಗಂಟೆಗಳ ಒಳಗೆ ಕೊರೊನಾ ನೆಗೆಟಿವ್ ವರದಿ ಪಡೆದಿರಬೇಕು ಎಂದು ಆದೇಶಿಸಿದೆ.
ಗುವಾಂಗ್ಝೌ ಮತ್ತು ಶೆನ್‍ಜೆನ್‌ನಲ್ಲಿನ ವಿಮಾನ ನಿಲ್ದಾಣಗಳಲ್ಲಿ ಸುಮಾರು 500 ವಿಮಾನಗಳನ್ನು ರದ್ದುಪಡಿಸಲಾಗಿದೆ. ಈ ಮಧ್ಯೆ, ಕೆಲವು ಗುವಾಂಗ್ಝೌ ಜಿಲ್ಲೆಗಳ ನಿವಾಸಿಗಳಿಗೆ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ತಿಳಿಸಲಾಗಿದೆ. ಫೋಶಾನ್ ಮತ್ತು ಶೆನ್‍ಜೆನ್‌ನಲ್ಲಿ ದೊಡ್ಡ ಪ್ರಮಾಣದ ಸ್ಕ್ರೀನಿಂಗ್ ಸಹ ನಡೆಯುತ್ತಿದೆ. ಆದ್ಯತೆಯ ಗುಂಪುಗಳ ಮೇಲೆ ಕೇಂದ್ರೀಕರಿಸಲು ಗುವಾಂಗ್ಝೌ ಅಧಿಕಾರಿಗಳು ನಗರದ ಸಾರ್ವಜನಿಕ ಕೋವಿಡ್ -19 ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದಾರೆ.