ETV Bharat / briefs

ಚಾಮರಾಜನಗರ ದುರಂತ..ಲೆಕ್ಕ ತಪ್ಪಿದ ಸಾವಿನ ಲೆಕ್ಕ, ಅಧಿಕಾರಿಗಳಲ್ಲೇ ಇಲ್ಲ ಸಮನ್ವಯ! - ಆಮ್ಲಜನಕ ದುರಂತ ಸುದ್ದಿ

ಚಾಮರಾಜನಗರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇಷ್ಟೆಲ್ಲಾ ಆದ ಬಳಿಕವೂ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಬದಲಾಗಿಲ್ಲ.

Chamarajanagar
Chamarajanagar
author img

By

Published : May 4, 2021, 7:54 PM IST

ಚಾಮರಾಜನಗರ: ಆಮ್ಲಜನಕ ದುರಂತ ನಡೆದ ಭಾನುವಾರ ಮಧ್ಯಾಹ್ನವೇ ಆಕ್ಸಿಜನ್ ಪ್ಲಾಂಟ್ ಖಾಲಿಯಾಗಿದ್ದರೂ ಚಾಮರಾಜನಗರ ಡಿಸಿಗೆ ಕೊರತೆ ಬಗ್ಗೆ ಗೊತ್ತಾಗಿದ್ದು ರಾತ್ರಿ ಹತ್ತಕ್ಕಂತೆ.

ಹೌದು, ಇಂದು ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಪ್ರಶ್ನೆಗೆ, ಚಾಮರಾಜನಗರ ಮೆಡಿಕಲ್ ಕಾಲೇಜಿನ ಡೀನ್ ಸಂಜೀವ್ ಕುಮಾರ್ ರೆಡ್ಡಿ ಉತ್ತರಿಸಿ, ಮಧ್ಯಾಹ್ನ 2 ರ ಸುಮಾರಿಗೆ ಆ್ಯಕ್ಸಿಜನ್ ಪ್ಲಾಂಟ್ ಸಂಪೂರ್ಣ ಖಾಲಿಯಾಗಿತ್ತು. ಅಂದು 126 ಮಂದಿ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದರು, ನಿತ್ಯ ನಮಗೆ 350 ಸಿಲಿಂಡರ್​ನಷ್ಟು ಅವಶ್ಯಕತೆ ಇದ್ದು ಅಷ್ಟು ಪ್ರಮಾಣದಲ್ಲಿ ಪೂರೈಕೆಯಾಗಿರಲಿಲ್ಲ. ಕೇವಲ 126 ಸಿಲಿಂಡರ್ ಅಷ್ಟೇ ಬಂದಿತ್ತು ಎಂದರು.

ಇದಾದ ಬಳಿಕ ಮಾತನಾಡಿದ, ಡಿಸಿ ಡಾ.ಎಂ.ಆರ್.ರವಿ ಅಂದು ಮಧ್ಯಾಹ್ನ 1 ಗಂಟೆಯವರೆಗೂ ವೈದ್ಯರು ಮತ್ತು ಅಧಿಕಾರಿಗಳ ಸಭೆ ನಡೆಸಿದ್ದೇನೆ. ಅಂದು ರಾತ್ರಿ 10 ಗಂಟೆವರೆಗೂ ಆಮ್ಲಜನಕ ಕೊರತೆ ಬಗ್ಗೆ ಡೀನ್ ಮಾಹಿತಿಯನ್ನೇ ಕೊಟ್ಟಿರಲಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ನೂರಾರು ಸೋಂಕಿತರ ಪ್ರಾಣದ ಜೊತೆ ಚೆಲ್ಲಾಟ ಆಡಿದಂತೆ ಡಿಸಿ ಅವರಿಗೆ ಮಾಹಿತಿಯೇ ಇಲ್ಲದ್ದು ನಿಜಕ್ಕೂ ದೊಡ್ಡ ವಿಪರ್ಯಾಸವಾಗಿದೆ.

ಇದನ್ನೂ ಓದಿ: ಸಿದ್ದು ಸಭೆಯಲ್ಲಿ ಆಕ್ಸಿಜೆನ್ ದುರಂತದ ಸತ್ಯ ಬಟಾಬಯಲು : ಮಧ್ಯಾಹ್ನವೇ ಖಾಲಿಯಾಗಿತ್ತು ಆಮ್ಲಜನಕ ..

ಲೆಕ್ಕ ತಪ್ಪಿದ ಸಾವಿನ ಲೆಕ್ಕ:

ಆರೋಗ್ಯ ಸಚಿವ ಸುಧಾಕರ್ ಸೋಮವಾರ ಚಾಮರಾಜನಗರದಲ್ಲಿ ಮಾತನಾಡಿ, ಆಮ್ಲಜನಕ ಕೊರತೆಯಿಂದ ಮೂವರು ಮಾತ್ರ ಮೃತಪಟ್ಟಿದ್ದಾರೆ ಎಂಬ ಹೇಳಿಕೆ ವಿರುದ್ಧ ವಿಪಕ್ಷ ನಾಯಕರು ಆಕ್ರೋಶ ಹೊರಹಾಕಿದ್ದು, ಮೂವರಲ್ಲ ಒಟ್ಟು 28 ಮಂದಿ ಆಮ್ಲಜನಕ ಕೊರತೆಯಿಂದ ಅಸುನೀಗಿದ್ದಾರೆ. ಇದಕ್ಕೆ ದಾಖಲೆಗಳು ಇದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಇಡೀ ದುರಂತ ಪ್ರಕರಣವನ್ನೇ ಮುಚ್ಚಿಹಾಕಲು ಸರ್ಕಾರವು ಅಧಿಕಾರಿಯೊಬ್ಬರನ್ನು ನೇಮಿಸಿದೆ. ನ್ಯಾಯಾಂಗ ತನಿಖೆಯಾದರಷ್ಟೇ ಮೃತಪಟ್ಟವರಿಗೆ ನ್ಯಾಯ ಸಿಗಲಿದೆ ಎಂದು ಕೈ ಶಾಸಕರು ಒತ್ತಾಯಿಸಿದ್ದಾರೆ.

ಸಾವಿಗೆ ಹೊಣೆ ಯಾರು..?

ಒಂದು ಜೀವವೂ ಬೆಲೆ ಕಟ್ಟಲಾಗದಿರುವುದರಿಂದ ಈಗ ಮೃತಪಟ್ಟಿರುವ ಕೊರೊನಾ ಸೋಂಕಿತರ ಸಾವಿಗೆ ಹೊಣೆ ಯಾರು ಎಂಬ ಪ್ರಶ್ನೆ ಮೂಡಿದೆ. ವಿಪಕ್ಷ ಹಾಗೂ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಅವರು, ಸಿಎಂ ಮತ್ತು ಸಚಿವರುಗಳೇ ಈ ಸಾವಿಗೆ ನೇರ ಹೊಣೆ ಎಂದು ಅಪಾದಿಸಿದ್ದಾರೆ. ಸಭೆಯಲ್ಲಿ ಡಿಸಿ ರವಿ, ಡೀನ್ ಅವರು ಕೊರತೆ ಬಗ್ಗೆ ಮಾಹಿತಿಯನ್ನೇ ಕೊಡಲಿಲ್ಲ, ಮೈಸೂರಿನಿಂದಲೂ ನಮಗೆ ಪೂರೈಕೆಯಾಗಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಸುಧಾಕರ್ ಸುಳ್ಳು ಹೇಳಿದ್ದಾರೆ, ಆಮ್ಲಜನಕ ಕೊರತೆಯಿಂದಲೇ 24 ಜನ ಸತ್ತಿದ್ದಾರೆ: ಸಿದ್ದರಾಮಯ್ಯ

ಆಮ್ಲಜನಕ ಕೊಡದಿರುವ ಆರೋಪವನ್ನು ಮೈಸೂರು ಡಿಸಿ ರೋಹಿಣಿ ಸಿಂಧೂರಿ ತಳ್ಳಿಹಾಕಿದ್ದಾರೆ. ಆಡಳಿತ ವ್ಯವಸ್ಥೆ ಕುಸಿದಿದ್ದರಿಂದ ಈ ಅವಘಡ ಸಂಂಭವಿಸಿತು ಎನ್ನಬೇಕೋ, ಇಲ್ಲ ಜಿಲ್ಲಾಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಂತ ನಡೆಯಿತು ಎಂದು ತಿಳಿಯುವುದೋ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಕೆಟ್ಟ ಮೇಲೂ ಬುದ್ಧಿ ಬಂದಿಲ್ಲ..!

ಚಾಮರಾಜನಗರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇಷ್ಟೆಲ್ಲಾ ಆದ ಬಳಿಕವೂ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಬದಲಾಗಿಲ್ಲ. ಕೊರೊನಾ ಸೋಂಕಿತರು ಆವರಣದಲ್ಲೇ ಅಡ್ಡಾಡುತ್ತಾರೆ, ಹೋಂ ಐಸೋಲೇಷನ್​ನಲ್ಲಿ ಇರಬೇಕಾದವರು ಆಸ್ಪತ್ರೆಗೆ, ಬೇರೆಡೆ ಓಡಾಡುತ್ತಾರೆ. ಸಾಮಾಜಿಕ ಅಂತರ ಕಾಪಾಡಿ ಮುನ್ನೆಚ್ಚರಿಕೆ ಇರಬೇಕಾದ ಆಸ್ಪತ್ರೆಯಲ್ಲೇ ಸದಾ ಜನಜಂಗುಳಿ ಇರಲಿದ್ದು, ಸಮರ್ಪಕವಾಗಿ ಕನಿಷ್ಠ ಪಕ್ಷ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸುವ ಕೆಲಸ ಆಗುತ್ತಿಲ್ಲ. ಕೋವಿಡ್ ಆಸ್ಪತ್ರೆ ಎನ್ನುವ ಈ ಆಸ್ಪತ್ರೆಗೆ ಯಾರು ಬೇಕಾದರೂ ಒಳಗಡೆ ಹೋಗಿ ಬರಬಹುದಾಗಿದೆ‌. ಇದಕ್ಕೊಂದು ನಿದರ್ಶನದಂತೆ ಸೋಮವಾರ ಓರ್ವ ಸೋಂಕಿತ ನಾಪತ್ತೆಯಾಗಿ ಬಳಿಕ ಮೃತಪಟ್ಟಿರುವ ಘಟನೆಯೂ ನಡೆದಿದೆ.

ಇದನ್ನೂ ಓದಿ: ಪಾಠ ಕಲಿಸಿದ ಆಕ್ಸಿಜನ್ ದುರಂತ: ಈಗಲಾದರೂ ಬದಲಾಗಬೇಕಿದೆ ಆಸ್ಪತ್ರೆ ಅವ್ಯವಸ್ಥೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.