ರಾಯಚೂರು : ಮುನಿರಾಬಾದ್-ಮೆಹಬೂಬನಗರ ರೈಲು ಮಾರ್ಗ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರೈಲು ಮಾರ್ಗ ನಿರ್ಮಾಣಕ್ಕೆ ಸಿಂಧನೂರು ತಾಲೂಕಿನ 196 ಎಕರೆ ಭೂಮಿಯನ್ನು ರೈತರು ಈಗಾಗಲೇ ಹಸ್ತಾಂತರಿಸಿದ್ದಾರೆ. ಸಾಧ್ಯವಾದಷ್ಟು ಬೇಗ ಅವರಿಗೆ ಪರಿಹಾರ ಮೊತ್ತ ಪಾವತಿಸಬೇಕು. ಈ ದಿಸೆಯಲ್ಲಿ ಪ್ರತಿ ಎಕರೆಗೆ ದರ ನಿಗದಿ ಪಡಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ವಿಶೇಷ ಭೂಸ್ವಾಧಿನಾಧಿಕಾರಿಗೆ ನಿರ್ದೇಶನ ನೀಡಿದರು.
ಸಿಂಧನೂರು ನಗರದಿಂದ ರಾಗಲಪರ್ವಿವರೆಗೆ ಇದೇ ರೈಲು ಮಾರ್ಗ ನಿರ್ಮಾಣಕ್ಕೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಅದೇ ರೀತಿ ಪೋತ್ನಾಳ್- ಕಲ್ಲೂರು ಮಾರ್ಗ ಸೇರಿದಂತೆ ಒಟ್ಟಾರೆ 877 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ, ಜಂಟಿ ಮೋಜಣಿ ಪ್ರಮಾಣಪತ್ರ (ಜೆಎಸಿ) ತಯಾರಿಸಿ ಸಲ್ಲಿಸುವಂತೆ ಸೂಚಿಸಿದರು.
ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಿ; ರಾಯಚೂರು ಜಿಲ್ಲಾಧಿಕಾರಿ ಸೂಚನೆ
ಸಿಂಧನೂರು ತಾಲೂಕಿನ 196 ಎಕರೆ ಭೂಮಿಯನ್ನು ರೈತರು ಈಗಾಗಲೇ ಮುನಿರಾಬಾದ್- ಮೆಹಬೂಬನಗರ ರೈಲು ಮಾರ್ಗ ನಿರ್ಮಾಣಕ್ಕಾಗಿ ನೀಡಿದ್ದು ಅವರಿಗೆ ಪರಿಹಾರ ನೀಡುವಂತೆ ಡಿಸಿ ಆರ್. ವೆಂಕಟೇಶ್ ಕುಮಾರ್ ಅಧಿಕಾರಿಗಳಿಗೆ ಹೇಳಿದರು.