ಕಲಬುರಗಿ: ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನೂತನ ಸಂಸದ, ಶಾಸಕರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಬಂಜಾರ ಸಮುದಾಯದ ಏಳ್ಗೆಯ ಕುರಿತು ಸಮಾಲೋಚಿಸಲಾಯಿತು. ಬಂಜಾರ ಸಮುದಾಯದ ಹಿತರಕ್ಷಣೆಗೆ ಬದ್ಧ ಎಂದು ಸಂಸದ ಡಾ.ಉಮೇಶ್ ಜಾಧವ್ ಭರವಸೆ ನೀಡಿದರು.
ಬಂಜಾರ ಸಮುದಾಯದ ಗೋರಸೀಕವಾಡಿ-ಗೋರಸೇನೆ ಸಂಘಟನೆಯ ವತಿಯಿಂದ ನೂತನ ಸಂಸದ ಡಾ.ಉಮೇಶ್ ಜಾಧವ್ ಹಾಗೂ ಶಾಸಕ ಅವಿನಾಶ್ ಜಾಧವ್ ಅವರಿಗೆ ಸನ್ಮಾನಿಸಲಾಯಿತು. ಕುಡಚಿ ಶಾಸಕ ಪಿ.ರಾಜೀವ್, ಮಾಜಿ ಶಾಸಕ ವಾಲ್ಮೀಕಿ ನಾಯಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.