ರಾಮನಗರ: ಐಎಂಎ ಸಂಸ್ಥೆಯಿಂದ ಮೋಸ ಹೋದವರಿಗೆ ನ್ಯಾಯ ಕೊಡಿಸುತ್ತೇನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರೂ ಗಾಬರಿಯಾಗುವುದು ಬೇಡ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
![bgl](https://etvbharatimages.akamaized.net/etvbharat/prod-images/3596497_rmg.jpg)
ಕಣ್ವ ಜಲಾಶಯ ಹತ್ತಿರ ಜನತಾ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಐಂಎ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಾನು ಗ್ರಾಮ ವಾಸ್ತವ್ಯ ಮಾಡುವ ಮೊದಲು ಡಿಐಜಿ ಹಾಗೂ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದೇನೆ ಎಂದು ಹೇಳಿದರು.
ಕೆಲ ಸೂಕ್ಷ್ಮ ಪ್ರಕರಣಗಳು ಅದರಲ್ಲೂ ತನಿಖೆ ಹಂತದಲ್ಲಿರುವ ಐಎಂಎ ಪ್ರಕರಣದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಹೀಗಿದ್ದರೂ ಮೋಸ ಹೋದವರಿಗೆ ಸರ್ಕಾರದ ಪರವಾಗಿ ಧೈರ್ಯ ನೀಡುತ್ತೇನೆ. ಯಾರೇ ತಪ್ಪಿತಸ್ಥರಾದರೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ನಿಮ್ಮ ಹಣ ವಾಪಸ್ ಕೊಡಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ನಿಮ್ಮೊಂದಿಗಿರುತ್ತದೆ ಎಂದು ಧೈರ್ಯ ತುಂಬಿದ್ದಾರೆ.