ಚಾಮರಾಜನಗರ: ಕೊರೊನಾ ತಡೆಗೆ ಮುಂಚೂಣಿ ವಾರಿಯರ್ಗಳಾಗಿ ದುಡಿಯುತ್ತಿರುವ ಚಾಮರಾಜನಗರ ಜಿಲ್ಲಾಸ್ಪತ್ರೆಯ 22 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.
ಈ ಕುರಿತು ವೈದ್ಯ ಡಾ.ಮಹೇಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಆಸ್ಪತ್ರೆಯ 10 ಮಂದಿ ವೈದ್ಯರು, 6 ಮಂದಿ ದಾದಿ ಹಾಗೂ 6 ಮಂದಿ ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಚಾಮರಾಜನಗರ ಮೆಡಿಕಲ್ ಕಾಲೇಜು ಇರುವುದರಿಂದ ವೈದ್ಯರ ಕೊರತೆ ಎದುರಾಗುವುದಿಲ್ಲ. ಆದರೆ, ಶುಶ್ರೂಷಕರ ಅವಶ್ಯಕತೆ ಇದ್ದು ಶೀಘ್ರವೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಕಳೆದ 15 ದಿನಗಳಿಗೆ ಹೋಲಿಸಿದರೆ ಈಗ ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ಕೊರೊನಾ ಕೇಸ್ಗಳು ಯಥಾಸ್ಥಿತಿ ಮುಂದುವರೆದಿದೆ. ಗುರುವಾರ ಸಂಜೆ 6 ರಿಂದ ಇಂದು ಬೆಳಗ್ಗೆ 9 ರವವರೆಗೆ ಐವರು ಸೋಂಕಿತರು ಅಸುನೀಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.