ನವದೆಹಲಿ: ಎರಡು ದಿನಗಳ ಹಿಂದೆಯಷ್ಟೇ ತಾವೂ ಸಲಿಂಗ ಸಂಬಂಧ ಹೊಂದಿರುವುದಾಗಿ ಬಹಿರಂಗಪಡಿದ್ದ 100 ಮೀಟರ್ ಓಟದ ರಾಷ್ಟ್ರೀಯ ಚಾಂಪಿಯನ್ ದ್ಯುತಿ ಚಾಂದ್ ನಿರ್ಧಾರಕ್ಕೆ ಅವರ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ದ್ಯುತಿ ತಮ್ಮದೇ ಕುಟುಂಬದ 19 ವಯಸ್ಸಿನ ಯುವತಿ ಜೊತೆ ಸಲಿಂಗ ಸಂಬಂಧ ಹೊಂದಿದ್ದು, ಅವಳ ಜೊತೆ ಮದುವೆಯಾಗುವುದಾಗಿ ಬಹಿರಂಗಪಡಿಸಿದ್ದರು. ಆದರೆ ದ್ಯುತಿಯ ನಿರ್ಧಾರದಿಂದ ಶಾಕ್ಗೊಳಗಾಗಿರುವ ಅವರ ತಾಯಿ ನಾವು ತಮ್ಮ ಮಗಳ ನಿರ್ಧಾರವನ್ನು ಒಪ್ಪಿಕೊಳ್ಳುವುದಿಲ್ಲ, ಅಷ್ಟಕ್ಕೂ ಅವಳು ಮದುವೆಯಾಗಬೇಕೆಂದಿರುವ ಯುವತಿ ನನ್ನ ಸಹೋದರನ ಮೊಮ್ಮಗಳು, ಅಂದರೆ ದ್ಯುತಿಗೆ ಮಗಳ ಸಂಬಂಧ ಬರುತ್ತದೆ. ಹಾಗಾಗಿ ಮಗಳನ್ನು ಮದುವೆಯಾಗಲು ಸಮಾಜ ಒಪ್ಪುವುದಿಲ್ಲ ಎಂದು ದ್ಯುತಿ ತಾಯಿ ಅಖೋಜಿ ತಿಳಿಸಿದ್ದಾರೆ.
ಸಮಾಜ ಸಲಿಂಗ ವಿವಾಹ ಒಪ್ಪುವುದಿಲ್ಲ ಎಂದು ಎಷ್ಟು ಬಾರಿ ಹೇಳಿದರೂ, ದ್ಯುತಿ ಮಾತ್ರ 'ಸಲಿಂಗ ಸಂಬಂಧ ಅಪರಾಧವಲ್ಲ ಎನ್ನುತ್ತಿದ್ದು, ಈ ಸಮರ್ಥನೆಗೆ ಕೋರ್ಟ್ ಒಪ್ಪಿಗೆ ಸೂಚಿಸಿದೆ ಎಂಬ ನೆವ ಮುಂದು ಮಾಡುತ್ತಿದ್ದಾರೆ. ಅಷ್ಟೇ ಏಕೆ ನೀವು ಒಪ್ಪಿದರೂ, ಒಪ್ಪದಿದ್ದರೂ ತನ್ನ ನಿರ್ಧಾರ ಬದಲಾಯಿಸುವುದಿಲ್ಲ, ನನಗೆ ತುಂಬಾ ಜನರ ಬೆಂಬಲವಿದೆ' ಎಂದು ಕುಟುಂಬಸ್ಥರಿಗೆ ದ್ಯುತಿ ಸ್ಪಷ್ಟವಾಗೇ ತನ್ನ ನಿರ್ಧಾರ ತಿಳಿಸಿದ್ದಾರೆ.
ದ್ಯುತಿ ತಂದೆ ತಾಯಿಗಳ ಹೆಸರನ್ನು ಉಳಿಸದಿದ್ದರೂ ಪರವಾಗಿಲ್ಲ, ಸರ್ಕಾರ ಅವಳ ಏಳಿಗೆಗಾಗಿ ಸಾಕಷ್ಟು ದುಡ್ಡು ನೀಡಿದೆ. ಅವಳು ಈ ವಿಚಾರವನ್ನು ಕೈಬಿಟ್ಟು ತನ್ನ ಕ್ರೀಡೆಯ ಕಡೆ ಹೆಚ್ಚು ಗಮನ ನೀಡಿ ದೇಶಕ್ಕೆ ಕೀರ್ತಿ ತರಬೇಕೆಂದು ಅಖೋಜಿ ಹೇಳಿದ್ದಾರೆ.