ETV Bharat / briefs

ಎಬಿಡಿ,ಬಟ್ಲರ್,ಧೋನಿ ಕ್ರಿಕೆಟ್​​ನಲ್ಲಷ್ಟೇ ಅಲ್ಲ, ಬೇರೆ ಆಟಗಳಲ್ಲೂ ಇವರದ್ದೇ ದರ್ಬಾರ್‌! - ಚಹಾಲ್​

ಸದ್ಯ ಕ್ರಿಕೆಟ್​​ನಲ್ಲಿ ಮಿಂಚುತ್ತಿರುವ ಅನೇಕ ಪ್ರತಿಭೆಗಳು ಈ ಹಿಂದೆ ಬೇರೆ ಬೇರೆ ಆಟಗಳಲ್ಲೂ ತಮ್ಮ ಚಾಣಾಕ್ಷ್ಯತನ ಮೆರೆದಿದ್ದು, ಅವುಗಳಿಂದೆಲ್ಲಾ ಅವರು ಕ್ರಿಕೆಟ್‌ ವೃದ್ಧಿಸಿಕೊಂಡಿದ್ದಾರೆ.

ಕ್ರಿಕೆಟ್​ ಪ್ಲೇಯರ್ಸ್​​
author img

By

Published : May 28, 2019, 11:36 AM IST

Updated : May 28, 2019, 11:19 PM IST

ಹೈದರಾಬಾದ್​​: ಕ್ರೀಡಾಳುಗಳು ತಾವು ಆಡುತ್ತಿರುವ ಕ್ರೀಡೆಯ ಜೊತೆಗೆ ಇತರ ಕ್ರೀಡೆಗಳಿಂದಲೂ ಸ್ಪೂರ್ತಿ ಪಡೆದು ಸಾಧನೆ ಮಾಡುತ್ತಾರೆ ಅನ್ನೋದಕ್ಕೆ ವಿಶ್ವದಲ್ಲಿ ಅನೇಕ ನಿದರ್ಶನಗಳಿವೆ. ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಅನೇಕ ಪ್ರತಿಭೆಗಳು ಈ ಹಿಂದೆ ಫುಟ್ಬಾಲ್, ಹಾಕಿ ಹಾಗು ಇತರ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ.ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಲೀಲಾಜಾಲವಾಗಿ ಬ್ಯಾಟ್ ಬೀಸಲು ಅವರಿಗೆ ಹಾಕಿ ಆಟದ ಕೌಶಲಗಳು ಸಹಕಾರಿಯಾಗಿದ್ದೇಗೆ ಗೊತ್ತೇ?

ಜೋಸ್‌ ಬಟ್ಲರ್‌, ಇಂಗ್ಲೆಂಡ್‌ ತಂಡದ ವಿಕೆಟ್‌ ಕೀಪರ್ ಕಮ್‌ ಬ್ಯಾಟ್ಸಮನ್‌. ಇವರು ಕ್ರಿಕೆಟ್‌ನಲ್ಲಿ ಶೈನ್ ಆಗಲು ಕಾರಣವಾಗಿದ್ದು ಹಾಕಿ ಅನ್ನೋ ವಿಚಾರ ನಿಮಗೆ ಗೊತ್ತೇ? ಅಷ್ಟು ಮಾತ್ರವಲ್ಲ. ವಿಶ್ವ ಕ್ರಿಕೆಟ್‌ನ ಅನೇಕ ಆಟಗಾರರು ಕ್ರಿಕೆಟ್‌ಗೂ ಮುನ್ನ ಬೇರೆ ಆಟಗಳಲ್ಲಿ ಪ್ರತಿಭೆ ತೋರಿಸಿದ್ದರು.

ಮೂಲತ: ಹಾಕಿ ಆಟಗಾರರಾಗಿದ್ದ ಜೋಸ್ ಬಟ್ಲರ್, ಹಾಕಿಯಲ್ಲಿ ಸ್ಟ್ರೈಕರ್‌ನ ವಿವಿಧ ಭಂಗಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಹಾಕಿ ಸ್ಟಿಕ್‌ನ ಆ್ಯಂಗಲ್ ಬದಲಾಯಿಸಿ ಚೆಂಡನ್ನು ಗೋಲಿನೆಡೆಗೆ ಸಾಗಿಸುವ ಕೌಶಲ ಅಲ್ಲಿಂದ ಅವರಿಗೆ ಕರಗತವಾಗಿದೆ. ಬಟ್ಲರ್ ಕೇವಲ ಹಾಕಿಯಿಂದ ಮಾತ್ರ ಕೌಶಲಗಳನ್ನು ಕಲಿತಿಲ್ಲ. ಟೆನ್ನಿಸ್ ಮತ್ತು ಬೇಸ್ ಬಾಲ್ ಕ್ರೀಡೆಗಳಿಂದಲೂ ಐಡಿಯಾಗಳನ್ನು ಪಡೆದಿದ್ದಾರೆ. ಈ ಕ್ರೀಡೆಗಳಿಂದ ಪಡೆದ ಕೌಶಲಗಳನ್ನು ಅವರನ್ನು ಕ್ರಿಕೆಟ್‌ನಲ್ಲಿ ಬಳಸಿಕೊಳ್ತಿದ್ದಾರೆ. ರ್ಯಾಂಪ್ ಶಾಟ್‌ ಬಟ್ಲರ್‌ನ ವಿಶೇಷತೆಗಳಲ್ಲೊಂದಾಗಿದ್ದು ಅವರು ಇದನ್ನು ಕಲಿತಿರುವುದು ಟೆನ್ನಿಸ್‌ ಮತ್ತು ಬೇಸ್‌ ಬಾಲ್‌ಗಳಲ್ಲಿ ಗಮನಿಸಿದ ಕೌಶಲಗಳ ಮೂಲಕ ಅಂತ ಅವರೇ ಹೇಳಿದ್ದಾರೆ. ಒಂದು ವೇಳೆ ಈ ಶಾಟ್‌ನ ಅವರು ಆರೇಳು ವರ್ಷಗಳ ಹಿಂದೇನೇ ಶುರುಮಾಡಿದ್ದರೆ, ಅದಕ್ಕವರು ಪೇಟೆಂಟ್ ಪಡೀಬಹುದಿತ್ತು ಅಂತ ಅವರ ಕೋಚ್ 2013 ರಲ್ಲೇ ತಮಾಷೆ ಮಾಡಿದ್ದರಂತೆ.

ಈ ರೀತಿ ವಿಶ್ವ ಕ್ರಿಕೆಟ್‌ನಲ್ಲಿ ಬಹಳಷ್ಟು ಮಂದಿ ಕಾಣ ಸಿಗುತ್ತಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ದಿಗ್ಗಜ ಎಬಿಡಿ ವಿಲಿಯರ್ಸ್‌ ಕ್ರಿಕೆಟ್ ಹೊರತುಪಡಿಸಿದಂತೆ, ಹಾಕಿ, ಫುಟ್ಬಾಲ್, ರಗ್ಬಿ, ಹಾಗು ಈಜು ಪಟು ಕೂಡಾ ಹೌದು. ಬೇರೆ ಬೇರೆ ಕ್ರೀಡೆಗಳ ಪಟ್ಟುಗಳನ್ನು ಅರಿತಿರುವ ಅವರು ಕ್ರಿಕೆಟ್‌ ಮೈದಾನದಲ್ಲಿ 360 ಡಿಗ್ರಿಯಲ್ಲಿ ಅದ್ಭುತವಾಗಿ ಬ್ಯಾಟಿಂಗ್‌ ಮಾಡಬಲ್ಲರು.

ಸದ್ಯ ವಿಶ್ವಕಪ್ ತಂಡದಲ್ಲಿದ್ದು, ಇಂಗ್ಲೆಂಡ್‌ಗೆ ಪಯಾಣ ಬೆಳೆಸಿರುವ ಯಜುವೇಂದ್ರ ಚಾಹಲ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಪ್ರತಿಭಾನ್ವಿತ ಚೆಸ್‌ ಪ್ಲೇಯರ್ ಕೂಡಾ. ಬುದ್ದಿಶಕ್ತಿ ಆಧಾರಿತ ಚೆಸ್‌ ಆಟ ಅವರಿಗೆ ಕ್ರಿಕೆಟ್‌ನಲ್ಲಿ ಏಕಾಗ್ರತೆ ವೃದ್ಧಿಸಲು ಸಹಾಯ ಮಾಡಿರುವ ಸಾಧ್ಯತೆ ಇದೆ.

ದೇಶಕ್ಕೆ ವಿಶ್ವಕಪ್‌ ತಂದುಕೊಟ್ಟಿರುವ ಅದ್ಭುತ ಆಟಗಾರ ಎಂ.ಎಸ್ ಧೋನಿಗೆ ಫುಟ್‌ಬಾಲ್ ಆಟ ಅಂದ್ರೆ ಅಚ್ಚುಮೆಚ್ಚು. ಕ್ರಿಕೆಟ್‌ಗೂ ಮುನ್ನ ಅವರು ಫುಟ್ಪಾಲ್‌ ಆಟ ಆಡುತ್ತಿದ್ದು ಅಲ್ಲಿ ಚುರುಕಿನ ಓಟ ಬಹಳ ಮುಖ್ಯವಾಗಿರುತ್ತದೆ. ಇವತ್ತಿಗೂ ಧೋನಿ ಸ್ಟ್ರೈಕರ್​ನಿಂದ ನಾನ್​ಸ್ಟ್ರೈಕರ್​ಕಡೆಗೆ ಮಿಂಚಿನ ವೇಗದಲ್ಲಿ ಓಡಬಲ್ಲರು. ಹಾಗಾಗಿ ಬೇರೆ ಬೇರೆ ಕ್ರೀಡೆಗಳ ಆಸಕ್ತಿ ಈ ಆಟಗಾರರ ದಕ್ಷತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರೆ ಅತಿಶಯೋಕ್ತಿಯಾಗದು.

Intro:Body:

ಮೂಲತ: ಹಾಕಿ ಆಟಗಾರರಾಗಿರುವ ಜೋಸ್ ಬಟ್ಲರ್, ಹಾಕಿಯಲ್ಲಿ  ಸ್ಟ್ರೈಕರ್‌ನ  ವಿವಿಧ ಭಂಗಿಗಳನ್ನು  ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಹಾಕಿ ಸ್ಟಿಕ್‌ ನ ಆ್ಯಂಗಲ್ ಅನ್ನು ಬದಲಾಯಿಸಿ ಚೆಂಡನ್ನು ಗೋಲಿನೆಡೆಗೆ ಸಾಗಿಸುವ ಕೌಶಲ ಅಲ್ಲಿಂದ ಅವರಿಗೆ ಕರಗತವಾಗಿದೆ. ಬಟ್ಲರ್ ಕೇವಲ ಹಾಕಿಯಿಂದ ಮಾತ್ರ ಕೌಶಲಗಳನ್ನು ಕಲಿತಿಲ್ಲ. ಟೆನ್ನಿಸ್ ಮತ್ತು ಬೇಸ್ ಬಾಲ್ ಕ್ರೀಡೆಗಳಿಂದಲೂ ಐಡಿಯಾಗಳನ್ನು ಪಡೆದಿದ್ದಾರೆ. ಈ ಕ್ರೀಡೆಗಳಿಂದ ಪಡೆದ ಕೌಶಲಗಳನ್ನು ಅವರನ್ನು  ಕ್ರಿಕೆಟ್‌ನಲ್ಲಿ ಬಳಸಿಕೊಳ್ತಿದ್ದಾರೆ. ರ್ಯಾಂಪ್ ಶಾಟ್‌  ಬಟ್ಲರ್ ನ ವಿಶೇಷತೆಗಳಲ್ಲೊಂದಾಗಿದ್ದು ಅವರು ಇದನ್ನು ಕಲಿತಿರುವುದು ಟೆನ್ನಿಸ್‌ ಮತ್ತು ಬೇಸ್‌ ಬಾಲ್‌ಗಳಲ್ಲಿ ಗಮನಿಸಿದ ಕೌಶಲಗಳ ಮೂಲಕ ಅಂತ ಅವರೇ ಹೇಳಿದ್ದಾರೆ. ಒಂದು ವೇಳೆ ಈ ಶಾಟ್‌ನ ಅವರು ಆರೇಳು ವರ್ಷಗಳ ಹಿಂದೇನೇ ಶುರುಮಾಡಿದ್ದರೆ, ಅದಕ್ಕವರು ಪೇಟೆಂಟ್ ಪಡೀಬಹುದಿತ್ತು ಅಂತ ಅವರ ಕೋಚ್ 2013 ರಲ್ಲೇ ತಮಾಷೆ ಮಾಡಿದ್ದರಂತೆ.

ಈ ರೀತಿ ವಿಶ್ವ ಕ್ರಿಕೆಟ್ ನಲ್ಲಿ ಬಹಳಷ್ಟು ಮಂದಿ ಕಾಣ ಸಿಗುತ್ತಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ದಿಗ್ಗಜ ಎಬಿಡಿ ವಿಲಿಯರ್ಸ್‌ ಕ್ರಿಕೆಟ್ ಹೊರತುಪಡಿಸಿದಂತೆ, ಹಾಕಿ, ಫುಟ್ಬಾಲ್, ರಗ್ಬಿ, ಹಾಗು ಈಜು ಪಟು ಕೂಡಾ ಹೌದು. ಬೇರೆ ಬೇರೆ ಕ್ರೀಡೆಗಳ ಪಟ್ಟುಗಳನ್ನು ಅರಿತಿರುವ ಅವರು ಕ್ರಿಕೆಟ್‌ ಮೈದಾನದಲ್ಲಿ 360 ಡಿಗ್ರಿಯಲ್ಲಿ ಬ್ಯಾಟಿಂಗ್‌ ಮಾಡಬಲ್ಲರು.

ಸದ್ಯ ವಿಶ್ವಕಪ್ ತಂಡದಲ್ಲಿದ್ದು, ಇಂಗ್ಲೆಂಡ್‌ಗೆ ಪಯಾಣ ಬೆಳೆಸಿರುವ ಯಜುವೇಂದ್ರ ಚಾಹಲ್ ಕ್ರಿಕೆಟ್‌ ಮಾತ್ರವಲ್ಲ, ಪ್ರತಿಭಾನ್ವಿತ ಚೆಸ್‌ ಪ್ಲೇಯರ್ ಕೂಡಾ. ಬುದ್ದಿಶಕ್ತಿ ಆಧಾರಿತ ಚೆಸ್‌ ಆಟ ಅವರಿಗೆ ಕ್ರಿಕೆಟ್ ನಲ್ಲಿ ಏಕಾಗ್ರತೆ ವೃದ್ಧಿಸಲು ಸಹಾಯ ಮಾಡಿರುವ ಸಾಧ್ಯತೆ ಇದೆ.

ದೇಶಕ್ಕೆ ವಿಶ್ವಕಪ್‌ ತಂದುಕೊಂಟ್ಟಿರುವ ಅದ್ಭುತ ಆಟಗಾರ ಎಂ.ಎಸ್ ಧೋನಿಗೆ ಫುಟ್‌ಬಾಲ್ ಆಟ ಅಂದ್ರೆ ಅಚ್ಚುಮೆಚ್ಚು. ಕ್ರಿಕೆಟ್‌ಗೂ ಮುನ್ನ ಅವರು ಫುಟ್ಪಾಲ್‌ ಆಟ ಆಡುತ್ತಿದ್ದು ಅಲ್ಲಿ ಚುರುಕಿನ ಓಟ ಬಹಳ ಮುಖ್ಯವಾಗಿರುತ್ತದೆ. ಇವತ್ತಿಗೂ ಧೋನಿ ರನ್ ಬಿಟ್ವೀನ್‌ ದಿ ವಿಕೆಟ್ಸ್‌ ನಲ್ಲಿ ಮಿಂಚಿನ ವೇಗದಲ್ಲಿ ಓಡಬಲ್ಲರು. ಹಾಗಾಗಿ ಬೇರೆ ಬೇರೆ ಕ್ರೀಡೆಗಳ ಆಸಕ್ತಿ ಈ ಆಟಗಾರರ ದಕ್ಷತೆ ಹೆಚ್ಚಿಸುವಲ್ಲಿ ಪಾತ್ರವಹಿಸಿದೆ ಎಂದರೆ ಅತಿಶಯೋಕ್ತಿ ಆಗದು.

Conclusion:
Last Updated : May 28, 2019, 11:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.