ಹೊಸದಿಲ್ಲಿ: ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ ಈಗ ಮಹತ್ವದ ಹೆಜ್ಜೆ ಇರಿಸಿದೆ. ಕ್ರಿಕೆಟ್ನಲ್ಲಿ ಐಪಿಎಲ್, ಕಬಡ್ಡಿಯಲ್ಲಿ ಪಿಕೆಎಲ್, ಫುಟ್ಬಾಲ್ನಲ್ಲಿ ಐಎಸ್ಎಲ್ ಹಾಗೂ ಬ್ಯಾಡ್ಮಿಂಟನ್ನಲ್ಲಿ ಪಿಬಿಎಲ್ನಂತೆ ಇಂಡಿಯನ್ ಬಾಕ್ಸಿಂಗ್ ಲೀಗ್ ಆರಂಭಿಸಲು ಬಿಎಫ್ಐ ನಿರ್ಧರಿಸಿದೆ.
ಐಪಿಎಲ್,ಐಎಸ್ಎಲ್,ಪಿಕೆಎಲ್ಗಳು ಭಾರತದಲ್ಲಿ ತುಂಬಾ ಯಶಸ್ಸು ಕಂಡ ಹಿನ್ನಲೆಯಲ್ಲಿ ಬಿಎಫ್ಐ ಕೂಡ ಬಾಕ್ಸಿಂಗ್ ಲೀಗ್ ಆರಂಭಿಸುತ್ತಿದೆ. ಈ ಲೀಗ್ ಜುಲೈ ಅಥವಾ ಅಗಸ್ಟ್ನಲ್ಲಿ ಉದ್ಘಾಟನೆಯಾಗುತ್ತಿದೆ.
ನವದೆಹಲಿಯಲ್ಲಿ ಇಂದು ನಡೆದ ಸಭೆಯಲ್ಲಿ ಬಿಎಫ್ಐ ಅಧ್ಯಕ್ಷ ಅಜಯ್ಸಿಂಗ್, ಲೀಗ್ನ ಕಮಿಷನರ್ ಅತುಲ್ ಪಾಂಡೆ ಬಾಕ್ಸಿಂಗ್ ಲೀಗ್ ಆರಂಭವಾಗುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಜುಲೈ 20ರಿಂದ ಆಗಸ್ಟ್ 11ರ ತನಕ ಬಾಕ್ಸಿಂಗ್ ಲೀಗ್ ನಡೆಯಲಿದೆ. ಹೊಸದಿಲ್ಲಿ, ಗುವಾಹಟಿ ಮತ್ತು ಪುಣೆಯಲ್ಲಿ ಸ್ಪರ್ಧೆಗಳು ನಡೆಯಲಿವೆ. ಭಾರತೀಯ ಮತ್ತು ವಿದೇಶಿ ಬಾಕ್ಸರ್ಗಳು ಈ ಲೀಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
6 ತಂಡಗಳು ಈ ಕೂಟದಲ್ಲಿ ಸ್ಪರ್ಧಿಸಲಿದ್ದು, ಪುರುಷರ ವಿಭಾಗದಲ್ಲಿ 52, 57, 69 ಮತ್ತು 75 ಕೆಜಿ ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದರೆ, ವನಿತೆಯರ ವಿಭಾಗದಲ್ಲಿ 51 ಮತ್ತು 60 ಕೆಜಿ ತೂಕ ವಿಭಾಗದ ಸ್ಪರ್ಧೆ ಇರಲಿದೆ.