ETV Bharat / briefs

ನಿಯಂತ್ರಣ ತಪ್ಪಿ ಮನೆಗೆ ನುಗ್ದಿದ ಬೋರ್‌ವೆಲ್ ಲಾರಿ.. ಚಾಲಕ ಸ್ಥಳದಲ್ಲೇ ಸಾವು - Hassan latest news

ಈ ಅಪಘಾತದಲ್ಲಿ ಅಕ್ಕನಹಳ್ಳಿ ಗ್ರಾಮ ಪಂಚಾಯತ್‌ ಸದಸ್ಯೆ ರೂಪಾ ಚೇತನ್ ಎಂಬುವರ ಹಾನಿಗೊಳಗಾಗಿದೆ. ಮನೆಯ ಮುಂಭಾಗಕ್ಕೆ ಢಿಕ್ಕಿ ಹೊಡೆದಿರುವುದರಿಂದ ಮುಂಭಾಗದ ಛಾವಣಿ ಸಂಪೂರ್ಣ ಕುಸಿದಿದೆ.

ಹಾಸನ
ಹಾಸನ
author img

By

Published : Jun 10, 2020, 2:45 PM IST

ಹಾಸನ/ಚನ್ನರಾಯಪಟ್ಟಣ : ಚಾಲಕನ ನಿಯಂತ್ರಣ ತಪ್ಪಿ ಬೋರ್‌ವೆಲ್ ಲಾರಿಯೊಂದು ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನುಗ್ಗೆಹಳ್ಳಿ ಸಮೀಪದ ಮುಳ್ಳಕೆರೆ ಗ್ರಾಮದಲ್ಲಿ ನಡೆದಿದೆ.

ರಾಜುವೇಲ್ (42) ಮೃತ ಚಾಲಕ. ತಮಿಳುನಾಡು ಮೂಲದ ಈತ ಹಲವು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬೋರ್‌ವೆಲ್ ಕೊರೆಯುವ ವಾಹನದ ಚಾಲಕನಾಗಿದ್ದ. ಜಿಲ್ಲೆಯ ನುಗ್ಗೆಹಳ್ಳಿ ಸಮೀಪದ ಮುಳ್ಳಕೆರೆ ಗ್ರಾಮದಲ್ಲಿ ಬೋರ್‌ವೆಲ್ ಕೊರೆಯಲು ಬೇಕಾಗುವ ಸಾಮಗ್ರಿಗಳನ್ನು ಹೊತ್ತೂಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಅಕ್ಕನಹಳ್ಳಿ ಗ್ರಾಮ ಪಂಚಾಯತ್‌ ಸದಸ್ಯೆ ರೂಪಾ ಚೇತನ್ ಎಂಬುವರ ಹಾನಿಗೊಳಗಾಗಿದೆ. ಮನೆಯ ಮುಂಭಾಗಕ್ಕೆ ಢಿಕ್ಕಿ ಹೊಡೆದಿರುವುದರಿಂದ ಮುಂಭಾಗದ ಛಾವಣಿ ಸಂಪೂರ್ಣ ಕುಸಿದಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತ ದೇಹವನ್ನು ಸ್ಥಳೀಯರ ನೆರವಿನೊಂದಿಗೆ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ನಗರದ ಹಿಮ್ಸ್ ಆಸ್ಪತ್ರೆಗೆ

ರವಾನಿಸಿದರು. ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.