ETV Bharat / briefs

ಕಲಬುರಗಿ: ಕೊರೊನಾ ಭೀತಿ ತಣ್ಣಗಾಗುತ್ತಿದ್ದಂತೆ ಬ್ಲ್ಯಾಕ್​ ಫಂಗಸ್​ ಕಾಟ!

author img

By

Published : Jun 2, 2021, 10:57 AM IST

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಮಾರಿ ಮಂಕಾಗುತ್ತಿದ್ದಂತೆ ಬ್ಲ್ಯಾಕ್​ ಫಂಗಸ್ ಲಗ್ಗೆಯಿಟ್ಟಿದೆ. ಬ್ಲ್ಯಾಕ್ ಫಂಗಸ್ ಕೊರೊನಾ ಸೋಂಕಿನಿಂದ ಗುಣಮುಖವಾದವರಲ್ಲಿ ಆತಂಕ ಸೃಷ್ಟಿ ಮಾಡುತ್ತಿದೆ.

Black fungus cases rising in Kalburgi
Black fungus cases rising in Kalburgi

ಕಲಬುರಗಿ: ಬಿಸಿಲೂರು ಕಲಬುರಗಿಯಲ್ಲಿ ಆರ್ಭಟಿಸುತ್ತಿದ್ದ ಕಿಲ್ಲರ್ ಕೊರೊನಾ ಹಾವಳಿ ತಗ್ಗುತ್ತಿದೆ. ಕೊರೊನಾ ಕಡಿಮೆ ಆಗುತ್ತಿದೆ ಅನ್ನುವಷ್ಠರಲ್ಲಿ ಬ್ಲ್ಯಾಕ್ ಫಂಗಸ್ ಹಾವಳಿ ಶುರುವಾಗಿದ್ದು, ಕೊರೊನಾದಿಂದ ಗುಣಮುಖರಾದವರಲ್ಲಿ ಆತಂಕ ಶುರುವಾಗಿದೆ.

ಹತ್ತುದಿನಗಳ ಹಿಂದೆ ನಿತ್ಯ ಸಾವಿರಕ್ಕೂ ಹೆಚ್ಚು ಹೊಸ ಕೇಸ್​ಗಳು ಪತ್ತೆಯಾಗುತ್ತಿದ್ದವು. ಆದ್ರೀಗ ಕೊರೊನಾ ಕಾಟ ಕಡಿಮೆಯಾಗುತ್ತಿದ್ದು, ಪ್ರತಿದಿನ ಕೇವಲ 100ರ ಒಳಗಡೆ ಹೊಸ ಕೇಸ್​ಗಳು ಬರುತ್ತಿವೆ. ಕಳೆದೊಂದು ವಾರದ ಡೇಟಾ ನೋಡಿದರೆ, 819 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಂದು ವಾರದಲ್ಲಿ 3714 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗುತ್ತಿದ್ದು, ವಾರದಲ್ಲಿ 39 ಜನ ಹೆಮ್ಮಾರಿಗೆ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 60074 ಜನರಿಗೆ ಸೋಂಕು ತಗುಲಿದ್ದು, 57521 ಜನ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1785 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಜಿಲ್ಲೆಯಲ್ಲಿ ಹೆಮ್ಮಾರಿ ಆರ್ಭಟಕ್ಕೆ 768 ಜನ ಮೃತಪಟ್ಟಿದ್ದಾರೆ. ಹಳ್ಳಿಗಳಲ್ಲೂ ಸೋಂಕು ತಗ್ಗುತ್ತಿದ್ದು, ಸೋಂಕಿತರನ್ನ ಕೋವಿಡ್ ಕೇರ್ ಸೇಂಟರ್​ಗೆ ದಾಖಲಿಸಲಾಗ್ತಿದೆ. ಜನರ ಎಚ್ಚರಿಕೆ, ಸುರಕ್ಷತಾ ಕ್ರಮದ ಜೊತೆಗೆ ಜಿಲ್ಲಾಡಳಿತ ಕೈಗೊಂಡಿರುವ ಕಠಿಣ ಕ್ರಮದಿಂದ ಸೋಂಕು ಕಡಿಮೆಯಾಗ್ತಿದೆ ಎಂದು ಜಿಲ್ಲಾಧಿಕಾರಿ ವಿಜಯ ವಿ. ಜೋತ್ಸ್ನಾ ಅಭಿಪ್ರಾಯಪಟ್ಟಿದ್ದಾರೆ.

ಬ್ಲ್ಯಾಕ್ ಫಂಗಸ್ ಹಾವಳಿ ಆತಂಕ: ಕೊರೊನಾ ಸೋಂಕಿನಿಂದ ಗುಣಮುಖ ಹೊಂದಿ ಕಪ್ಪು ಶಿಲೀಂಧ್ರ ಸೋಂಕು ತಗುಲಿ ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಐವರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, 104 ಜನರಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಪತ್ತೆಯಾಗಿದೆ. ಬ್ಲ್ಯಾಕ್ ಫಂಗಸ್ ಕನ್ಫರ್ಮ್ ಸಲುವಾಗಿ ಲ್ಯಾಬ್ ವರದಿಗಾಗಿ ಜಿಲ್ಲಾಡಳಿತ ಎದುರು ನೋಡುತ್ತಿದೆ. ಬ್ಲ್ಯಾಕ್ ಫಂಗಸ್ ಲಕ್ಷಣಗಳಿರುವ 12 ಜನ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಮ್ಸ್ ಸೇರಿ ಖಾಸಗಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣಗಳಿರುವ 87 ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊರ ಜಿಲ್ಲೆಯ 20 ಜನ ಬ್ಲ್ಯಾಕ್ ಫಂಗಸ್ ಶಂಕಿತ ರೋಗಿಗಳು ಕಲಬುರಗಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಹೆಚ್​ಒ ಡಾ. ಶರಣಬಸಪ್ಪ ಗಣಜಲಖೇಡ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.