ETV Bharat / briefs

ಬಾರ್ ಎತ್ತಂಗಡಿಗೆ ಆಗ್ರಹಿಸಿ ಮೈಸೂರಲ್ಲಿ ಶಾಸಕನಿಂದಲೇ ಪ್ರತಿಭಟನೆ - undefined

ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಜನರೇ ಒಟ್ಟಾಗಿ ಬಾರ್​ ಮುಚ್ಚಿಸೋ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೋರ್ವ ಶಾಸಕ ಬಾರ್ ತೆರೆಯುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಮೈಸೂರಲ್ಲಿ ಸ್ವತಃ ತಾವೇ ಪ್ರತಿಭಟನೆ ನಡೆಸಿದ್ದಾರೆ.

ಬಾರ್​ ತೆರವಿಗೆ ಒತ್ತಾಯಿಸಿ ಬಿಜೆಪಿ ಶಾಸಕನಿಂದ ಪ್ರತಿಭಟನೆ
author img

By

Published : Apr 29, 2019, 4:45 PM IST

ಮೈಸೂರು: ಜನವಸತಿ ಪ್ರದೇಶದಲ್ಲಿ ಬಾರ್​ ತೆರೆಯುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಸ್ವತಃ ಬಿಜೆಪಿ ಶಾಸಕರೇ ಜನರೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ನಗರದ ಲಕ್ಷ್ಮೀಕಾಂತ ಬಡಾವಣೆಯಲ್ಲಿ ನಡೆದಿದೆ.

ಹೆಬ್ಬಾಳ ಬಳಿ ಇರುವ ಲಕ್ಷ್ಮೀಕಾಂತ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಜನವಸತಿ ಪ್ರದೇಶವಾಗಿರುವ ಇಲ್ಲಿ ದೇವಸ್ಥಾನ ಹಾಗೂ ಶಾಲೆಗಳಿವೆ. ಹೀಗಾಗಿ ಸ್ಥಳೀಯ ಪ್ರಭಾವಿ ವ್ಯಕ್ತಿಗೆ ಬಾರ್ ನಡೆಸಲು ಅನುಮತಿ ನೀಡಿರುವ ಕ್ರಮದ ವಿರುದ್ಧವಾಗಿ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.‌ ನಾಗೇಂದ್ರ ಅಲ್ಲಿನ ನಿವಾಸಿಗಳೊಂದಿಗೆ ಬಾರ್ ಎದುರೇ ಧರಣಿ ನಡೆಸಿದರು.

ಜನವಸತಿ ಪ್ರದೇಶದಲ್ಲಿರುವ ಬಾರ್​ ತೆರವಿಗೆ ಬಿಜೆಪಿ ಶಾಸಕ ಆಗ್ರಹ, ಪ್ರತಿಭಟನೆ

ಇನ್ನು ಇದೇ ವೇಳೆ ಸ್ಥಳಕ್ಕಾಗಮಿಸಿದ ಬಾರ್ ಮಾಲೀಕರೊಂದಿಗೆ ಮಾತಿನ ಚಕಮಕಿ ಸಹ ನಡೆಯಿತು. ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ನಾಗೇಂದ್ರ ಮಾತನಾಡಿ, ಕೂಡಲೇ ಜನವಸತಿ ಸ್ಥಳದಲ್ಲಿರುವ ಬಾರ್​ನ್ನು ತೆರವುಗೊಳಿಸಬೇಕು ಹಾಗೂ ಪರವಾನಗಿ ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಅಲ್ಲದೆ, ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್. ನಾಗೇಂದ್ರ ಎಚ್ಚರಿಕೆ ನೀಡಿದರು.

Intro:ಮೈಸೂರು: ಬಾರ್ ತೆರೆಯುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ವಿರೋಧಿಸಿ ಸ್ವತಃ ಬಿಜೆಪಿ ಶಾಸಕರೇ ಜನರೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ನಗರದ ಲಕ್ಷ್ಮೀಕಾಂತ ಬಡಾವಣೆಯಲ್ಲಿ ನಡೆದಿದೆ.
Body:ನಗರದ ಹೆಬ್ಬಾಳದ ಬಳಿ ಇರುವ ಲಕ್ಷ್ಮೀಕಾಂತ ಬಡಾವಣೆಯನ್ನು ಜನವಸತಿ ಪ್ರದೇಶ ಹಾಗೂ ದೇವಸ್ಥಾನ, ಶಾಲೆಗಳಿರುವ ಸ್ಥಳದಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿಗೆ ಬಾರ್ ನಡೆಸಲು ಅನುಮತಿ ನೀಡಿರುವ ವಿರುದ್ಧವಾಗಿ ಕ್ಷೇತ್ರದ ಬಿಜೆಪಿ ಶಾಸಕ ಎಲ್.‌ನಾಗೇಂದ್ರ ನಿವಾಸಿಗಳೊಂದಿಗೆ ಬಾರ್ ಎದರುಗಡೆಯೇ ಕುಳಿತು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಬಾರ್ ಮಾಲೀಕರೊಂದಿಗೆ ಮಾತಿನ ಚಕಮಕಿ ಸಹ ನಡೆಸಲಾಯಿತು.
ಈ ಸಂದರ್ಬದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ನಾಗೇಂದ್ರ ಮಾತನಾಡಿ ಕೂಡಲೇ ಜನವಸತಿ ಸ್ಥಳದಲ್ಲಿ ಬಾರ್ ಅನ್ನು ತೆರವುಗೊಳಿಸಬೇಕು ಹಾಗೂ ಲೈಸನ್ಸ್ ಅನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದ ಶಾಸಕ ಈ ಸಂಬಂಧ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್. ನಾಗೇಂದ್ರ ಎಚ್ಚರಿಕೆ ನೀಡಿದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.