ETV Bharat / briefs

ವಾರದ ಹಿಂದಷ್ಟೇ ಮದುವೆಯಾದ ವ್ಯಕ್ತಿ ಸಾವು: ಕೊರೊನಾ ಪರೀಕ್ಷೆಗಾಗಿ ಮಾದರಿ ರವಾನೆ - ಕೊರೊನಾ ವೈರಸ್

ಅನಾರೋಗ್ಯದ ಹಿನ್ನೆಲೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದ ವ್ಯಕ್ತಿ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದು, ಗಂಟಲು ದ್ರವ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಏನೆಂಬುದು ತಿಳಿಯಲಿದೆ.

Bhatkal Corona suspect died in mangalore

author img

By

Published : Jun 30, 2020, 3:19 PM IST

Updated : Jul 1, 2020, 2:55 PM IST

ಭಟ್ಕಳ: ತಾಲೂಕಿನಲ್ಲಿ ವಾರದ ಹಿಂದೆಯಷ್ಟೇ ಮದುವೆಯಾದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.

ಅಜಾಜ್ ನಗರ 1ನೇ ಕ್ರಾಸ್‌ನ 25 ವರ್ಷದ ನಿವಾಸಿ ಮೃತಪಟ್ಟವ. ಅನಾರೋಗ್ಯದ ಹಿನ್ನೆಲೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದ ವ್ಯಕ್ತಿ ಇಂದು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾನೆ.

ಮೇಲ್ನೋಟಕ್ಕೆ ಈತ ಬ್ರೇನ್ ಟ್ಯೂಮರ್​ನಿಂದ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿಯಲಿದೆ.

ತಾಲೂಕಿನಲ್ಲಿ ಹಬ್ಬಿದ ಕೊರೊನಾ ಗಾಳಿ ಸುದ್ದಿ

ಇಂದು ಮಂಗಳೂರಿನಲ್ಲಿ ಸಾವಪ್ಪಿರುವ ವ್ಯಕ್ತಿ ಕೋವಿಡ್​​ನಿಂದ ಸಾವನ್ನಪ್ಪಿದ್ದಾನೆಂದು ತಾಲೂಕಿನಾದ್ಯಂತ ಗಾಳಿ ಸುದ್ದಿ ಹಬ್ಬಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ.

Last Updated : Jul 1, 2020, 2:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.