ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ನಗರದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ್ದರೂ ಸಹ ಜನ ಕ್ಯಾರೇ ಎನ್ನದೆ ಓಡಾಡುತ್ತಿದ್ದಾರೆ.
ಒಂದು ವಾರದ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗೆ ಮಾತ್ರ ಓಡಾಡಲು ಅವಕಾಶವಿದೆ. ಅಗತ್ಯ ಇದ್ದವರು ಐಡಿ ಕಾರ್ಡ್ ತೋರಿಸಿಯೇ ಮುಂದೆ ಹೋಗಬೇಕೆಂಬ ನಿಯಮವಿದೆ.
ಆದರೆ ಲಾಕ್‌ಡೌನ್ ಗೆ ಡೋಂಟ್ ಕೇರ್ ಎಂದು ಕೆಲವರು ಬೇಕಾಬಿಟ್ಟಿಯಾಗಿ ಎಲ್ಲೆಡೆ ವಾಹನ ಸಂಚರಿಸಿದ್ದಕ್ಕೆ ಇಂದು 70 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಒಂದು ವಾರದ ಲಾಕ್ ಡೌನ್ ಆರಂಭವಾದ ದಿನದಿಂದ ಇಲ್ಲಿಯವರೆಗೆ ನಗರ ಪೊಲೀಸರು 800 ವಾಹನಗಳನ್ನು ಸೀಜ್ ಮಾಡಿದ್ದು, ಈ ವಾಹನಗಳನ್ನು ಲಾಕ್ ಡೌನ್ ಮುಗಿದ ನಂತ್ರ ಅವುಗಳ ಮಾಲೀಕರ ಕೈಗೆ ಹಸ್ತಾಂತರ ಮಾಡಲಿದ್ದಾರೆ.