ಬೆಳ್ತಂಗಡಿ : ತಾಲೂಕಿನ ಬಾರ್ಯ ಗ್ರಾಮದ ಸೂರ್ಯ ಅಲಿಂಗಿರ ನಾರಾಯಣ ಶೆಟ್ಟಿ ಎಂಬುವವರ ಮಗ ಯೋಧ ಸಂದೇಶ್ ಶೆಟ್ಟಿ(34) ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ.
ನಿನ್ನೆ ಇವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಇವರು ಭಾರತೀಯ ಸೇನೆಯಲ್ಲಿ14 ವರ್ಷಗಳಿಂದ ಸೇವೆಯಲ್ಲಿದ್ದರು. ರಜೆಯಿದ್ದ ಕಾರಣ ಊರಿಗೆ ಬಂದಿದ್ದರು. ಉತ್ತರ ಪ್ರದೇಶದ ಮಥುರಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.