ETV Bharat / briefs

ಸಮಯಪಾಲನೆ ಪ್ರತಿಪಾದಿಸಿದ ಮೋದಿ... ಮನೆಯಿಂದ ಕೆಲಸ ಬಿಲ್​ಕುಲ್ ಸಾಧ್ಯವಿಲ್ಲ ಎಂದ ಪ್ರಧಾನಿ..!

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಎಲ್ಲ ಸಹೋದ್ಯೋಗಿಗಳಿಗೆ ಸಮಯ ಪಾಲನೆಯಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗಬಾರದು ಎಂದು ಖಡಕ್ಕಾಗಿ ಹೇಳಿದ್ದಾರೆ.

ಮೋದಿ
author img

By

Published : Jun 13, 2019, 11:06 AM IST

ನವದೆಹಲಿ: ಪ್ರಧಾನಿ ಹುದ್ದೆಯನ್ನು ಐದು ವರ್ಷ ಯಶಸ್ವಿಯಾಗಿ ನಿಭಾಯಿಸಿದ್ದ ನರೇಂದ್ರ ಮೋದಿ ತಮ್ಮ ಎರಡನೇ ಅವಧಿಯಲ್ಲಿ ಮತ್ತಷ್ಟು ಪರಿಣಾಮಕಾರಿ ಹಾಗೂ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಎಲ್ಲ ಸಹೋದ್ಯೋಗಿಗಳಿಗೆ ಸಮಯ ಪಾಲನೆಯಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗಬಾರದು ಎಂದು ಖಡಕ್ಕಾಗಿ ವಾರ್ನಿಂಗ್​ ಕೊಟ್ಟಿದ್ದಾರೆ.

ಪ್ರತಿಯೊಬ್ಬ ಸಚಿವನೂ ಸಮಯ ಪಾಲನೆಯಲ್ಲಿ ಯಾವುದೇ ರಾಜಿಯಾಗಬಾರದು. ಮನೆಯಿಂದ ಕೆಲಸ ನಿರ್ವಹಿಸುವಂತಿಲ್ಲ. ಇದು ಬೇರೆ ಸಹೋದ್ಯೋಗಿಗಳಿಗೆ ಕೆಟ್ಟ ಉದಾಹರಣೆಯಾಗುವ ಸಾಧ್ಯತೆ ಇದೆ ಎಂದು ಮೋದಿ ಸಂಪುಟ ಸಭೆಯಲ್ಲಿ ಹೇಳಿದ್ದಾರೆ.

ಹಿರಿಯ ಸಚಿವರು ಪ್ರಥಮ ಬಾರಿಗೆ ಸಚಿವ ಸ್ಥಾನಕ್ಕೇರಿದವರಿಗೆ ಎಲ್ಲ ರೀತಿಯ ಮಾರ್ಗದರ್ಶನ ಮಾಡಬೇಕು. ರಾಜ್ಯ ಖಾತೆಯ ಸಚಿವರಿಗೆ ಕೇಂದ್ರ ಸಚಿವರು ಕೆಲಸವನ್ನು ವಹಿಸಬೇಕು ಮತ್ತು ಕಾರ್ಯ ನಿರ್ವಹಣೆ ಹೆಚ್ಚಿಸುವ ಕೆಲಸವನ್ನೂ ಮಾಡಬೇಕು ಎಂದು ಸಭೆಯಲ್ಲಿ ಪ್ರಧಾನಿ ತಿಳಿಸಿದ್ದಾರೆ.

ಸಚಿವರು ಆಗಾಗ್ಗೆ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರನ್ನು ಭೇಟಿ ಮಾಡಬೇಕು. ಶಾಸಕರು ಸಚಿವರ ಭೇಟಿಗೆ ಅವಕಾಶ ಕೇಳಿದಾಗ ಅನುಮತಿ ನೀಡಬೇಕು ಎಂದು ಮೋದಿ ಸಚಿವರಿಗೆ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಪ್ರತಿಯೊಬ್ಬ ಸಚಿವರೂ ತಮ್ಮ ಮುಂದಿನ ಐದು ವರ್ಷದ ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಪ್ರಸ್ತುತ ಪಡಿಸುವಂತೆ ಪ್ರಧಾನಿ ಮೋದಿ ಸೂಚಿಸಿದ್ದರು.

Intro:Body:

ಸಮಯಪಾಲನೆ ಪ್ರತಿಪಾದಿಸಿದ ಮೋದಿ... ಮನೆಯಿಂದ ಕೆಲಸ ಬಿಲ್​ಕುಲ್ ಸಾಧ್ಯವಿಲ್ಲ ಎಂದ ಪ್ರಧಾನಿ..!

ನವದೆಹಲಿ: ಪ್ರಧಾನಿ ಹುದ್ದೆಯನ್ನು ಐದು ವರ್ಷ ಯಶಸ್ವಿಯಾಗಿ ನಿಭಾಯಿಸಿದ್ದ ನರೇಂದ್ರ ಮೋದಿ ತಮ್ಮ ಎರಡನೇ ಅವಧಿಯಲ್ಲಿ ಮತ್ತಷ್ಟು ಪರಿಣಾಮಕಾರಿ ಹಾಗೂ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಎಲ್ಲ ಸಹೋದ್ಯೋಗಿಗಳಿಗೆ ಸಮಯ ಪಾಲನೆಯಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗಬಾರದು ಎಂದು ಖಡಕ್ಕಾಗಿ ಹೇಳಿದ್ದಾರೆ.

ಪ್ರತಿಯೊಬ್ಬ ಸಚಿವನೂ ಸಮಯ ಪಾಲನೆಯಲ್ಲಿ ಯಾವುದೇ ರಾಜಿಯಾಗಬಾರದು. ಮನೆಯಿಂದ ಕೆಲಸ ನಿರ್ವಹಿಸುವಂತಿಲ್ಲ. ಇದು ಬೇರೆ ಸಹೋದ್ಯೋಗಿಗಳಿಗೆ ಕೆಟ್ಟ ಉದಾಹರಣೆಯಾಗುವ ಸಾಧ್ಯತೆ ಇದೆ ಎಂದು ಮೋದಿ ಸಂಪುಟ ಸಭೆಯಲ್ಲಿ ಹೇಳಿದ್ದಾರೆ.

ಹಿರಿಯ ಸಚಿವರು ಪ್ರಥಮ ಬಾರಿಗೆ ಸಚಿವ ಸ್ಥಾನಕ್ಕೇರಿದವರಿಗೆ ಎಲ್ಲ ರೀತಿಯ ಮಾರ್ಗದರ್ಶನ ಮಾಡಬೇಕು. ರಾಜ್ಯ  ಖಾತೆಯ ಸಚಿವರಿಗೆ ಕೇಂದ್ರ ಸಚಿವರು ಕೆಲಸವನ್ನು ವಹಿಸಬೇಕು ಮತ್ತು ಕಾರ್ಯ ನಿರ್ವಹಣೆ ಹೆಚ್ಚಿಸುವ ಕೆಲಸವನ್ನೂ ಮಾಡಬೇಕು ಎಂದು ಸಭೆಯಲ್ಲಿ ಪ್ರಧಾನಿ ತಿಳಿಸಿದ್ದಾರೆ.

ಸಚಿವರು ಆಗಾಗ್ಗೆ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರನ್ನು ಭೇಟಿ ಮಾಡಬೇಕು. ಶಾಸಕರು ಸಚಿವರ ಭೇಟಿಗೆ ಅವಕಾಶ ಕೇಳಿದಾಗ ಅನುಮತಿ ನೀಡಬೇಕು ಎಂದು ಮೋದಿ ಸಚಿವರಿಗೆ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಪ್ರತಿಯೊಬ್ಬ ಸಚಿವರೂ ತಮ್ಮ ಮುಂದಿನ ಐದು ವರ್ಷದ ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಪ್ರಸ್ತುತಪಡಿಸುವಂತೆ ಪ್ರಧಾನಿ ಮೋದಿ  ಸೂಚಿಸಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.