ಮುಂಬೈ: ಕಳೆದ ಬಾರಿಯ ಚಾಂಪಿಯನ್ ಸಿಎಸ್ಕೆ ತವರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಹೈದರಾಬಾದ್ಗೆ ಶಿಫ್ಟ್ ಮಾಡಿತ್ತು. ಆದರೆ, ಅದರ ಹಿಂದೆ ಬಿಸಿಸಿಐ ಲಾಭದ ಲೆಕ್ಕಚಾರ ಅಡಗಿದೆ ಎನ್ನುವುದು ಇದೀಗ ಬೆಳೆಕಿಗೆ ಬಂದಿದೆ.
ಕಳೆದ ವಾರವಷ್ಟೇ ಬಿಸಿಸಿಐ ತಮಿಳುನಾಡು ಕ್ರಿಕೆಟ್ ಮಂಡಳಿಯಿಂದ ಚಿದಂಬರಂ ಸ್ಟೇಡಿಯಂನಲ್ಲಿ I, J, K ಸ್ಟ್ಯಾಂಡ್ಗಳಿಗೆ ಅನುಮತಿ ಪಡೆಯಲು ವಿಫಲವಾದ್ದರಿಂದ ಬಿಸಿಸಿಐ ಫೈನಲ್ ಪಂದ್ಯವನ್ನು ಹೈದರಾಬಾದ್ಗೆ ಶಿಫ್ಟ್ ಮಾಡಿತ್ತು.
ಲೀಗ್ನಲ್ಲಿ ಎಲ್ಲಾ ಪಂದ್ಯಗಳನ್ನೂ ಆಡಲು ಅನುಮತಿ ನೀಡಿದ್ದ ಬಿಸಿಸಿಐ ಫೈನಲ್ ಪಂದ್ಯವನ್ನು ಮಾತ್ರ ಏಕೆ ಶಿಫ್ಟ್ ಮಾಡಿತ್ತೆಂದರೆ, ಲೀಗ್‌ನ 7 ಪಂದ್ಯಗಳ ಟಿಕೆಟ್ನಿಂದ ಬರುವ ಹಣ ತವರಿನ ಫ್ರಾಂಚೈಸಿಗಳಿಗೆ ಹೋಗುತ್ತದೆ. ಆದರೆ, ಪ್ಲೇಆಫ್ ಪಂದ್ಯಗಳಿಂದ ಬರುವ ಟಿಕೆಟ್ ಹಣ ಮಾತ್ರ ಬಿಸಿಸಿಐಗೆ ಸೇರುವುದರಿಂದ ಫೈನಲ್ ಪಂದ್ಯವನ್ನು ಹೈದರಾಬಾದ್ಗೆ ಶಿಫ್ಟ್ ಮಾಡಿದೆ.
ಚಿದಂಬರಂ ಸ್ಟೇಡಿಯಂ ನಿಷೇಧಿತ ಮೂರು ಸ್ಟ್ಯಾಂಡ್ಗಳು ಸುಮಾರು 12000 ಸೀಟ್ಗಳನ್ನು ಹೊಂದಿದ್ದು, ಇಲ್ಲಿ ಫೈನಲ್ ನಡೆದರೆ 12000 ಟಿಕೆಟ್ನಿಂದ ಬರುವ ಲಕ್ಷಾಂತರ ಆದಾಯ ಕೈತಪ್ಪುತ್ತದೆ ಎಂಬ ಕಾರಣದಿಂದ ಬಿಸಿಸಿಐ ಪೈನಲ್ ಪಂದ್ಯವನ್ನು ಹೈದರಾಬಾದ್ಗೆ ಶಿಫ್ಟ್ ಮಾಡಿದೆ. ಆದರೆ, ಮೊದಲ ಕ್ವಾಲಿಫೈಯರ್ ಪಂದ್ಯ ಚೆನ್ನೈನಲ್ಲೇ ನಡೆಯಲಿದೆ.
ಬಿಸಿಸಿಐ ಪ್ಲೇಆಫ್ನ 4 ಪಂದ್ಯಗಳಿಂದ ಸುಮಾರು 20 ಕೋಟಿ ಆದಾಯ ನಿರೀಕ್ಷಿಸುತ್ತಿದೆ. ಕಳೆದ ಬಾರಿ 18 ಕೋಟಿ ಆದಾಯ ಗಳಿಸಿತ್ತು.