ಹೈದರಾಬಾದ್: ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗಿದೆ. ಈ ಮಧ್ಯೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2019-20ರ ತವರಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ವೇಳಾಪಟ್ಟಿಯ ಪ್ರಕಾರ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧ ಒಟ್ಟು ಐದು ಟೆಸ್ಟ್, ಒಂಭತ್ತು ಏಕದಿನ ಪಂದ್ಯ ಹಾಗೂ 12 ಟಿ-20 ಪಂದ್ಯಗಳು ಭಾರತದಲ್ಲಿ ಜರುಗಲಿವೆ.
ತವರಿನ ಪಂದ್ಯಗಳು ದಕ್ಷಿಣ ಆಫ್ರಿಕಾ ವಿರುದ್ಧ ಫ್ರೀಡಮ್ ಟ್ರೋಫಿ ಆಡುವ ಮೂಲಕ ಆರಂಭವಾಗಲಿದೆ. ಸೆಪ್ಟೆಂಬರ್ 15ರಂದು ಗಾಂಧಿ-ಮಂಡೇಲಾ ಸರಣಿ ಶುರುವಾಗಲಿದೆ. ಈ ಸರಣಿಯಲ್ಲಿ ಮೂರು ಟಿ-20, ಮೂರು ಟೆಸ್ಟ್ ಪಂದ್ಯಗಳು ಇರಲಿವೆ. ಸೆ.15ರಂದು ಆರಂಭವಾಗುವ ಈ ಸರಣಿ ಅಕ್ಟೋಬರ್ 23ರಂದು ಮುಕ್ತಾಯವಾಗಲಿದೆ.
ವಿಶ್ವಕಪ್ನಲ್ಲಿ ಅಪರೂಪದ ದಾಖಲೆ ಬರೆದ ಪಾಕಿಸ್ತಾನ..!
ಈ ಸರಣಿಯ ಬಳಿಕ ಬಾಂಗ್ಲಾದೇಶವು ಭಾರತದ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿ ನವೆಂಬರ್ 3ರಂದು ಶುರುವಾಗಲಿದೆ. ಬಾಂಗ್ಲಾದೇಶ ವಿರುದ್ಧ ಮೂರು ಟಿ-20 ಹಾಗೂ ಎರಡು ಟೆಸ್ಟ್ಗಳನ್ನು ವಿರಾಟ್ ಬಳಗ ಆಡಲಿದ್ದು ನವೆಂಬರ್ 26ರಂದು ಮುಕ್ತಾಯವಾಗಲಿದೆ.
ಈ ವರ್ಷದ ಕೊನೆಯ ತಿಂಗಳಲ್ಲಿ ಕೆರಬಿಯನ್ನರು ಭಾರತಕ್ಕೆ ಬರಲಿದ್ದು, ಮೂರು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದ್ದಾರೆ. ಡಿಸೆಂಬರ್ 6ರಿಂದ 22ರವರೆಗೆ ಸರಣಿ ನಡೆಯಲಿದೆ.
-
ANNOUNCEMENT 🚨🚨 - BCCI announces Home season for 2019-20 #TeamIndia
— BCCI (@BCCI) June 3, 2019 " class="align-text-top noRightClick twitterSection" data="
Full details here ➡️➡️ https://t.co/vyPQ2s0JVi pic.twitter.com/qbKwad4P0p
">ANNOUNCEMENT 🚨🚨 - BCCI announces Home season for 2019-20 #TeamIndia
— BCCI (@BCCI) June 3, 2019
Full details here ➡️➡️ https://t.co/vyPQ2s0JVi pic.twitter.com/qbKwad4P0pANNOUNCEMENT 🚨🚨 - BCCI announces Home season for 2019-20 #TeamIndia
— BCCI (@BCCI) June 3, 2019
Full details here ➡️➡️ https://t.co/vyPQ2s0JVi pic.twitter.com/qbKwad4P0p
ಜಿಂಬಾಬ್ವೆ ವಿರುದ್ಧ ಟಿ-20 ಆಡುವ ಮೂಲಕ ಕೊಹ್ಲಿ ಟೀಮ್ 2020 ವರ್ಷ ಆರಂಭಿಸಲಿದೆ. ಜಿಂಬಾಬ್ವೆ ವಿರುದ್ಧ ಜನವರಿ 5ರಿಂದ 10ರವರೆಗೆ ಮೂರು ಟಿ-20 ಪಂದ್ಯಗಳು ನಡೆಯಲಿವೆ.
ಎರಡು ಪಂದ್ಯ ಸೋತು ಕಂಗೆಟ್ಟಿರುವ ದ.ಆಫ್ರಿಕಾಗೆ ಮತ್ತೊಂದು ಆಘಾತ ..!
ಜನವರಿ 14ರಂದು ಆಸೀಸ್ ಟೀಮ್ ಭಾರತದ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಲಿದ್ದು, ಮೂರನೇ ಹಾಗೂ ಪ್ರವಾಸದ ಕೊನೆಯ ಏಕದಿನ ಪಂದ್ಯ ಜನವರಿ 19ರಂದು ನಡೆಯಲಿದೆ.
ಮಾರ್ಚ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ, ಭಾರತದಲ್ಲಿ ಮೂರು ಏಕದಿನ ಪಂದ್ಯ ಆಡಲಿದೆ. ಮಾರ್ಚ್ 12ರಂದು ಮೊದಲ ಒಡಿಐ ನಡೆದರೆ ಮಾರ್ಚ್ 18ರಂದು ಸರಣಿಯ ಕೊನೆಯ ಪಂದ್ಯ ಜರುಗಲಿದೆ.