ETV Bharat / briefs

ಅಶ್ವಿನ್ ತಮ್ಮ ಹಕ್ಕನ್ನು ಬಳಿಸಿಕೊಂಡಿದ್ದು ಸರಿ, ನನ್ನ ಪ್ರಕಾರ ಮಂಕಡ್​ಗೂ ಮುನ್ನ ಎಚ್ಚರಿಕೆ ಅಗತ್ಯ : ದ್ರಾವಿಡ್​

author img

By

Published : Mar 27, 2019, 7:56 PM IST

ನನ್ನ ಪ್ರಕಾರ ಅನಿವಾರ್ಯತೆಗಾಗಿ ಬ್ಯಾಟ್ಸ್​ಮನ್​ಗಳನ್ನು ಮಂಕಡ್​​ ಮೂಲಕ ಔಟ್​ ಮಾಡುವುದು ಒಪ್ಪುವಂತದ್ದಲ್ಲ. ಮಂಕಡ್​ ಔಟ್​ಗೆ ನನ್ನ ವಿರೋಧವಿಲ್ಲ. ಆದರೆ, ಎಚ್ಚರಿಕೆ ನೀಡಿ ನಂತರ ತಿದ್ದಿಕೊಳ್ಳದಿದ್ದರೆ ಆ ರೀತಿ ಔಟ್​ ಮಾಡುವುದಕ್ಕೆ ಬೌಲರ್​ಗೆ ಅವಕಾಶವಿದೆ. ಆದರೆ, ಔಟ್​ ಮಾಡುವ ಮುನ್ನ ವಾರ್ನಿಂಗ್​ ನೀಡುವುದು ಉತ್ತಮ ಎಂದಿದ್ದಾರೆ ದ್ರಾವಿಡ್​.

dravid

ಜೈಪುರ: ಜಂಟಲ್​ಮನ್​ ಗೇಮ್​ ಕ್ರಿಕೆಟ್​ನಲ್ಲಿ ನಿಯಮಗಳ ಪ್ರಕಾರ ಮಂಕಡ್ ಮೂಲಕ​ ಔಟ್​ ಮಾಡಬಹುದು , ಅದು ತಪ್ಪಲ್ಲ, ಆದರೆ ಆ ರೀತಿ ಔಟ್​ ಮಾಡುವ ಮೊದಲು ಬ್ಯಾಟ್ಸ್​ಮನ್​ಗೆ ಎಚ್ಚರಿಕೆ ನೀಡಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ ಜಂಟಲ್​​​ಮನ್​ ಖ್ಯಾತಿಯ ರಾಹುಲ್​ ದ್ರಾವಿಡ್​

ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ನಾಯಕ ಅಶ್ವಿನ್​ ಜೋಸ್​ ಬಟ್ಲರ್​ ಅವರನ್ನು ಮಂಕಡ್​ ರನೌಟ್​ ಮಾಡಿ ವಿವಾದಕ್ಕೆ ಒಳಗಾಗಿದ್ದರು. ಇದಕ್ಕೆ ವಿಶ್ವ ಕ್ರಿಕೆಟ್​ನಾದ್ಯಂತ ಚರ್ಚೆ ನಡೆದು ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದವು. ಇದಕ್ಕೆ ಕನ್ನಡಿಗ ದ್ರಾವಿಡ್​ ಪ್ರತಿಕ್ರಿಯೆ ನೀಡಿದ್ದು, ನಿಯಮಾವಳಿಗಿಂತ ಕ್ರೀಡಾ ಸ್ಪೂರ್ತಿ ಮುಖ್ಯ ಎಂದಿದ್ದಾರೆ.

mankad ashwin
ಬಟ್ಲರ್​ ರನ್ನು ಮಂಕಡ್​ ಮೂಲಕ ಔಟ್​ ಮಾಡುತ್ತಿರುವ ಅಶ್ವಿನ್​​

ನನ್ನ ಪ್ರಕಾರ ಅನಿವಾರ್ಯತೆಗಾಗಿ ಬ್ಯಾಟ್ಸ್​ಮನ್​ಗಳನ್ನು ಮಂಕಡ್​​ ಮೂಲಕ ಔಟ್​ ಮಾಡುವುದು ಒಪ್ಪುವಂತದ್ದಲ್ಲ. ಮಂಕಡ್​ ಔಟ್​ಗೆ ನನ್ನ ವಿರೋಧವಿಲ್ಲ ಆದರೆ ಎಚ್ಚರಿಕೆ ನೀಡಿ ನಂತರ ತಿದ್ದಿಕೊಳ್ಳದಿದ್ದರೆ ಆ ರೀತಿ ಔಟ್​ ಮಾಡುವುದಕ್ಕೆ ಬೌಲರ್​ಗೆ ಅವಕಾಶವಿದೆ ಎಂದಿದ್ದಾರೆ.

ಇನ್ನು ಅಶ್ವಿನ್​ ವಿರುದ್ಧ ಕೆಲವರು ಅತಿರೇಕವಾಗಿ ಪ್ರತಿಕ್ರಿಯಸಿದ್ದಾರೆ. ಆದರೆ ಅಶ್ವಿನ್​ ಕ್ರಿಕೆಟ್​ ನಿಯಾಮಾನುಸಾರ ಬಟ್ಲರ್​ ಅವರನ್ನು ಔಟ್​ ಮಾಡಿದ್ದಾರೆ. ಅವರ ದೃಷ್ಟಿಯಲ್ಲಿ ಅದು ಸರಿಯಾಗಿದೆ. ಆದರೆ, ಕೆಲವರ ದೃಷ್ಟಿಯಲ್ಲಿ ಅದು ತಪ್ಪಿರಬಹುದು. ಅಷ್ಟು ಮಾತ್ರಕ್ಕೆ ಅಶ್ವಿನ್​ರನ್ನು ಕೆಟ್ಟ ವ್ಯಕ್ತಿ ಎಂದು ಹೇಳಬೇಕಿಲ್ಲ ಎಂದಿದ್ದಾರೆ. ನನ್ನ ಪ್ರಕಾರ ಅಶ್ವಿನ್​ ಔಟ್​ ಮಾಡುವ ಮುನ್ನ ಬಟ್ಲರ್​ಗೆ ವಾರ್ನ್​ ಮಾಡಬೇಕಿತ್ತು. ಅಶ್ವಿನ್​ ಅದನ್ನು ಮಾಡಲಿಲ್ಲ, ಬಟ್​ ಅದನ್ನು ಇಷ್ಟು ದೊಡ್ಡ ವಿಷಯ ಮಾಡುವ ಅಗತ್ಯವಿರಲಿಲ್ಲ. ಅವರನ್ನು ಈ ವಿಷಯವಾಗಿ ಸಬ್ಯಸ್ಥ - ಅಸಬ್ಯಸ್ಥ ಎಂದು ನಿರ್ಧರಿಸಲು ಆಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಾನೊಬ್ಬ ಕೋಚ್ ​ಆಗಿ ಆಟಗಾರರಿಗೆ ಮಂಕಡ್​ ಮಾಡುವುದಕ್ಕು ಮುನ್ನ ಬ್ಯಾಟ್ಸ್​ಮನ್​ಗೆ ಎಚ್ಚರಿಕೆ ನೀಡಿ ಎಂದು ತಿಳಿಸುತ್ತೇನೆ. ವಾರ್ನ್​ ಮಾಡಿದ ನಂತರವು ಆತ ತನ್ನ ತಪ್ಪನ್ನು ಮುಂದುವರಿಸಿದರೆ ನೀವು ಮಂಕಡ್​ ಪ್ರಯತ್ನಿಸಬಹದು. ಆದರೆ ಕೆಲವು ಜನರು ನನ್ನ ಮಾತನ್ನು ಒಪ್ಪದಿರಬಹುದು, ಆದರೆ, ನಿಯಮದಲ್ಲಿ ಎದುರಾಳಿಗೆ ವಾರ್ನ್​ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ, ಅಶ್ವಿನ್​ ನಿಯಮಗಳನ್ನು ಓದಿದ್ದಾರೆ, ಅದನ್ನ ಒಪ್ಪುವುದು ಬಿಡುವುದು ಅವರ ಇಷ್ಟಕ್ಕೆ ಬಿಟ್ಟಿದ್ದು,ಆದರೆ ಆತನ ನಡವಳಿಕೆಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.