ಕೋಲ್ಕತ್ತಾ: ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ರನ್ ಹೊಳೆಯೇ ಹರಿದಿದೆ.
ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ಬರೋಬ್ಬರಿ 232 ರನ್ ಗಳಿಸಿತು.
ಪ್ಲೇ ಆಫ್ಗೇರುವ ನಿಟ್ಟಿನಲ್ಲಿ ಕೆಕೆಆರ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದ್ದ ಭಾನುವಾರದ ಪಂದ್ಯದಲ್ಲಿ ಆರಂಭಿಕ ಆಟಗಾರ ಶುಭ್ಮನ್ ಗಿಲ್ 76(45), ಕ್ರಿಸ್ ಲಿನ್54(29), ಆಂಡ್ರೆ ರಸೆಲ್80(40) ಅಬ್ಬರ ಬ್ಯಾಟಿಂಗ್ನಿಂದ ಬೃಹತ್ ಮೊತ್ತ ಪೇರಿಸಿತು.
ಈ ಟಾರ್ಗೆಟ್ ಆರಂಭದಲ್ಲಿ ಮುಂಬೈ ಪಾಲಿಗೆ ಗೆಲುವು ಕಠಿಣ ಎಂದೇ ಪರಿಗಣಿಸಲಾದರೂ ನಂತರದಲ್ಲಿ ರೋಹಿತ್ ಪಡೆಗೆ ಗೆಲುವಿನ ಆಸೆ ಚಿಗುರಿತ್ತು.
-
The @KKRiders win by 34 runs and register their 100th Victory in IPL 👌👌 pic.twitter.com/zAl5lMBW8O
— IndianPremierLeague (@IPL) April 28, 2019 " class="align-text-top noRightClick twitterSection" data="
">The @KKRiders win by 34 runs and register their 100th Victory in IPL 👌👌 pic.twitter.com/zAl5lMBW8O
— IndianPremierLeague (@IPL) April 28, 2019The @KKRiders win by 34 runs and register their 100th Victory in IPL 👌👌 pic.twitter.com/zAl5lMBW8O
— IndianPremierLeague (@IPL) April 28, 2019
ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದ ಮುಂಬೈ ತಂಡಕ್ಕೆ ಆರನೇ ವಿಕೆಟ್ಗೆ ಬ್ಯಾಟಿಂಗ್ಗೆ ಬಂದ ಹಾರ್ದಿಕ್ ಪಾಂಡ್ಯ ಅಕ್ಷರಶಃ ಅಬ್ಬರಿಸಿದರು. ಗೆಲುವಿನ ಆಸೆ ಬಿಟ್ಟಿದ್ದ ಮುಂಬೈ ಪಾಳಯದಲ್ಲಿ ಪಾಂಡ್ಯ ಗೆಲುವಿನ ಮಿಂಚು ಹರಿಸಿದರು.
ಕೇವಲ 34 ಎಸೆತದಲ್ಲಿ ಆಕರ್ಷಕ 91 ಬಾರಿಸಿದ ಪಾಂಡ್ಯ ಈ ಆವೃತ್ತಿಯ ವೇಗದ ಅರ್ಧ ಶತಕ(17 ಎಸೆತ) ಬಾರಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೂ ಪಾತ್ರರಾದರು.
ಪಾಂಡ್ಯ ಔಟಾಗುತ್ತಲೇ ಮುಂಬೈ ಗೆಲುವು ಕ್ಷೀಣವಾಯಿತು. ಕೊನೆಯಲ್ಲಿ 20 ಓವರ್ಗೆ ಏಳು ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿ 34 ರನ್ಗಳಿಂದ ಸೋಲೊಪ್ಪಿಕೊಂಡಿತು.
ಸತತ ಆರು ಪಂದ್ಯಗಳನ್ನು ಸೋತಿದ್ದ ಕೆಕೆಆರ್ ಮುಂಬೈ ಸೋಲಿಸಿ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಜೊತೆಗೆ ಪ್ಲೇ ಆಫ್ ಸಾಧ್ಯತೆಯನ್ನೂ ಉಳಿಸಿಕೊಂಡಿದೆ.