ನವದೆಹಲಿ: ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಎನ್ಡಿಎ ಮೈತ್ರಿಕೂಟಕ್ಕೆ ಪೂರ್ಣ ಬಹುಮತ ನೀಡಿದ್ದು, ಪಕ್ಷದ ಮುಖಂಡರಿಗೆ ಮತ್ತಷ್ಟು ಹುರುಪು ನೀಡಿದೆ.
ಎಕ್ಸಿಟ್ ಪೋಲ್ಗಳು ಮೋದಿ ಸರ್ಕಾರಕ್ಕೆ ಮತ್ತೆ ಮಣೆ ಹಾಕಿದ್ದು, ಇದೇ ಖುಷಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಳೆ ಭರ್ಜರಿ ಔತಣಕೂಟವನ್ನು ಆಯೋಜನೆ ಮಾಡಿದ್ದಾರೆ.
ಹೆಚ್ಚಿನ ಓದಿಗಾಗಿ:
ಈ ಬಾರಿನೂ ಮೋದಿನ ಅಲುಗಾಡಿಸೋದಕ್ಕೆ ಆಗಲ್ವಂತೆ... ಎಲ್ಲ ಸಮೀಕ್ಷೆಗಳು ಹೇಳ್ತಿವೆ ಈ ಭವಿಷ್ಯ!
ಅಮಿತ್ ಶಾ ಏರ್ಪಡಿಸಿರುವ ಔತಣಕೂಟದಲ್ಲಿ ಎನ್ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಕೇಂದ್ರ ಸಂಪುಟ ಸಚಿವರು ಇದೇ ವೇಳೆ ಮಾತುಕತೆ ನಡೆಸಲಿದ್ದಾರೆ.
ಏಳನೇ ಹಂತದ ಮತದಾನ ಭಾನುವಾರ ನಡೆದಿದ್ದು ಈ ಮೂಲಕ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಎನ್ಡಿಎ ಮೈತ್ರಿಕೂಟವೇ ಮತ್ತೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ಬರೆದಿವೆ. ಮೇ 23ರಂದು ಮಹಾ ಫಲಿತಾಂಶ ತಿಳಿದು ಬರಲಿದೆ.