ETV Bharat / briefs

ಗಾಂಧಿನಗರದಲ್ಲಿ ಪಿಎಸ್ಎ ಆಮ್ಲಜನಕ ಘಟಕ ಉದ್ಘಾಟಿಸಿದ ಅಮಿತ್ ಶಾ

author img

By

Published : Apr 24, 2021, 8:55 PM IST

ಗುಜರಾತ್‌ನಲ್ಲಿನ ಕೋವಿಡ್​ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಅಮಿತ್​ ಶಾ ಶುಕ್ರವಾರ ರೂಪಾನಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. 280 ಲೀಟರ್ ಸಾಮರ್ಥ್ಯ ಹೊಂದಿರುವ ಪಿಎಸ್‌ಎ ಆಮ್ಲಜನಕ ಘಟಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಉದ್ಘಾಟಿಸಿದರು.

amith sha
amith sha

ಗುಜರಾತ್‌: ಗಾಂಧಿನಗರದ ಕೊಲಾವಾಡಾದಲ್ಲಿರುವ ಆಸ್ಪತ್ರೆಯಲ್ಲಿ ನಿಮಿಷಕ್ಕೆ 280 ಲೀಟರ್ ಸಾಮರ್ಥ್ಯ ಹೊಂದಿರುವ ಪಿಎಸ್‌ಎ ಆಮ್ಲಜನಕ ಘಟಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಉದ್ಘಾಟಿಸಿದರು.

ಇದೇ ತರಹದ ಇನ್ನೂ 11 ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು. ಗುಜರಾತ್​ ನಾಗರಿಕರ ನೆರವು, ಪ್ರಧಾನಮಂತ್ರಿಗಳ ತುರ್ತು ಪರಿಸ್ಥಿತಿ ಪರಿಹಾರ (ಪಿಎಂ ಕೇರ್ಸ್) ನಿಧಿಯಡಿ ಈ ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಉಪಸ್ಥಿತರಿದ್ದರು. ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ, ರಾಜ್ಯದಲ್ಲಿ ಕೊರೊನಾ ರೋಗಿಗಳಿಗೆ ಹೆಚ್ಚುತ್ತಿರುವ ಆಮ್ಲಜನಕದ ಅವಶ್ಯಕತೆಗಳನ್ನು ಪೂರೈಸಲು ಗುಜರಾತ್‌ನಲ್ಲಿ ಇನ್ನೂ 11 ಪಿಎಸ್‌ಎ ಆಮ್ಲಜನಕ ಯೋಜನೆಗಳು ಬರಲಿವೆ ಎಂದು ಶಾ ಹೇಳಿದರು. ದೇಶಾದ್ಯಂತ ಇಂತಹ ನೂರಾರು ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.

ಕೋಲಾವಾಡಾ ಸ್ಥಾವರದಲ್ಲಿ, 280 ಲೀಟರ್ ಸಾಮರ್ಥ್ಯವುಳ್ಳ ಆಮ್ಲಜನಕ ಘಟಕದಿಂದ ಪ್ರತಿ ನಿಮಿಷ ರೋಗಿಗಳಿಗೆ ಸರಬರಾಜು ಮಾಡಲಾಗುತ್ತದೆ. ಸದ್ಯ ಇರುವ ರೋಗಿಗಳ ಅಗತ್ಯತೆಗಳನ್ನು ಪೂರೈಸುವಲ್ಲಿ ಪೂರೈಕೆ ಮುಂದುವರೆಯಲಿದೆ ಎಂದು ಖಚಿತಪಡಿಸಿಕೊಳ್ಳಲು ಒಂದು ವ್ಯವಸ್ಥೆಯನ್ನು ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಸರ್ಕಾರವು ದೊಡ್ಡ ಅನಿಲ ಸಿಲಿಂಡರ್‌ಗಳನ್ನು ಸಹ ಕಾಯ್ದಿರಿಸಿದೆ ಎಂದು ಅವರು ಹೇಳಿದರು.

ಪ್ರಸ್ತುತ, 66 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಮ್ಲಜನಕದ ಬೆಂಬಲದಲ್ಲಿದ್ದಾರೆ. ಗುಜರಾತ್ ಕೈಗಾರಿಕಾ ರಾಜ್ಯವಾಗಿರುವುದರಿಂದ ಇತರ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಉತ್ಪಾದಿಸುತ್ತದೆ. ತಮ್ಮ ಗಾಂಧಿನಗರ ಕ್ಷೇತ್ರದ ಜನರಿಗೆ ಅಗತ್ಯ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಶಾ 10 ಕೋಟಿ ರೂ. ಅನುದಾನ ನೀಡಿದರು.

ವ್ಯವಸ್ಥೆಯ ಭಾಗವಾಗಿ, ಆರು ಆಂಬ್ಯುಲೆನ್ಸ್‌ಗಳು, ಎರಡು ಮೊಬೈಲ್ ಐಸಿಯು, ಎರಡು ಮೊಬೈಲ್ ಪ್ರಯೋಗಾಲಯಗಳನ್ನು ಬಿಡುಗಡೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.