ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಲಸಿಕೆಗಳ ತೀವ್ರ ಕೊರತೆ ಎದುರಿಸುತ್ತಿರುವ ಕಾರಣ ರಾಜ್ಯಗಳಲ್ಲಿ ಲಸಿಕಾ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ.
ಈ ಸಂಬಂಧ ಇಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಲಸಿಕೆಗಳ ಕೊರತೆ ಸಂಬಂಧ ಕೇಂದ್ರ ಸರ್ಕಾರವನ್ನು ದೂರಿದ್ದಾರೆ. ಕೊರೊನಾ ಲಸಿಕೆ ಪ್ರಮಾಣವನ್ನು ಪೂರೈಸುವುದನ್ನು ನಿರಾಕರಿಸುವ ಭಾರತ್ ಬಯೋಟೆಕ್ ಪತ್ರವನ್ನು ಈ ವೇಳೆ ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ರಾಜಧಾನಿ ಕೊವ್ಯಾಕ್ಸಿನ್‌ನಿಂದ ಹೊರಗುಳಿದಿದೆ ಎಂದು ಹೇಳಿರುವ ಅವರು, ಕೋವಿಶೀಲ್ಡ್‌ನ ಪ್ರಮಾಣವು ಮುಂದಿನ 9 ದಿನಗಳವರೆಗೆ ಮಾತ್ರ ಇರಲಿದೆ ಎಂದಿದ್ದಾರೆ. ಈ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಲವಾರು ರಾಜ್ಯಗಳು, ಕೋವಿಡ್ ಲಸಿಕೆಗಳನ್ನು ಸಂಗ್ರಹಿಸಲು ಜಾಗತಿಕ ಟೆಂಡರ್‌ಗಳನ್ನು ಮುಕ್ತಮಾಡುವಂತೆ ಮನವಿ ಮಾಡಿವೆ. ಅಂತಹ ರಾಜ್ಯಗಳ ಪಟ್ಟಿಯಲ್ಲಿ ದೆಹಲಿ, ಕರ್ನಾಟಕ, ತೆಲಂಗಾಣ, ಒಡಿಶಾ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸೇರಿವೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಪ್ರಸ್ತುತ ಬಿಕ್ಕಟ್ಟನ್ನು ನಿಭಾಯಿಸುತ್ತಿರುವುದು ಅಸಹ್ಯಕ್ಕಿಂತ ಕಡಿಮೆ ಏನಿಲ್ಲ. ಸಡಿಲ ವಿಧಾನ, ದೂರದೃಷ್ಟಿ ಇಲ್ಲ, ಸಿದ್ಧತೆ ಇಲ್ಲ, ತಪ್ಪಾದ ಆದ್ಯತೆಗಳು ಮತ್ತು ಅನುಭೂತಿ ಇಲ್ಲ ಈ ಮುಖಾಂತರ ಕೋಟ್ಯಂತರ ಭಾರತೀಯರು ನೀಡಿದ ನಂಬಿಕೆಗೆ ದ್ರೋಹ ಮಾಡಲಾಗಿದೆ ಎಂದು ದೂರಿದ್ದಾರೆ.
ಬುಧವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ, ದೇಶದಲ್ಲಿ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಲು ಲಸಿಕೆ ತಯಾರಿಸಲು ಸಮರ್ಥವಾಗಿರುವ ಕಂಪನಿಗಳಿಗೆ ತಂತ್ರಜ್ಞಾನವನ್ನು ವರ್ಗಾಯಿಸಲು ಭಾರತ್ ಬಯೋಟೆಕ್‌ಗೆ ನಿರ್ದೇಶನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದರು.
ನಂತರ, ಹನ್ನೆರಡು ವಿರೋಧ ಪಕ್ಷಗಳು ಪಿಎಂ ಮೋದಿಗೆ ಪತ್ರವೊಂದನ್ನು ಬರೆದಿದ್ದು, ಪ್ರಸ್ತುತ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸರ್ಕಾರಕ್ಕೆ ಸಲಹೆಗಳನ್ನು ನೀಡಿವೆ. ಪ್ರಸ್ತುತ ಪರಿಸ್ಥಿತಿಯನ್ನು "ಅಪೋಕ್ಯಾಲಿಪ್ಸ್ ಮಾನವ ದುರಂತ" ಎಂದು ಹೇಳುತ್ತಾ, ಈ ಪಕ್ಷಗಳು ದೇಶೀಯ ಲಸಿಕೆ ಉತ್ಪಾದನೆಯನ್ನು ವಿಸ್ತರಿಸಲು ಕಡ್ಡಾಯ ಪರವಾನಗಿ ಕೋರಿ ಸರ್ಕಾರವನ್ನು ಒತ್ತಾಯಿಸಿವೆ.