ETV Bharat / briefs

ಪಾಕ್‌ಗೆ ಶಾಕ್​ ಕೊಟ್ಟ ಕ್ರಿಕೆಟ್​ ಶಿಶು!ಅಭ್ಯಾಸ ಪಂದ್ಯದಲ್ಲಿ ಗೆದ್ದು ಬೀಗಿದ ಆಫ್ಘಾನಿಸ್ತಾನ! - ಅಫ್ಘಾನಿಸ್ತಾನ

ಐಸಿಸಿ ಏಕದಿನ ವಿಶ್ವಕಪ್​ನ ಅಭ್ಯಾಸ ಪಂದ್ಯದಲ್ಲಿ ಆಫ್ಘಾನಿಸ್ತಾನ ಭರ್ಜರಿ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ಪಾಕ್​ಗೆ ಶಾಕ್​ ನೀಡಿದೆ.

ಬ್ಯಾಟಿಂಗ್​ ಅಬ್ಬರ
author img

By

Published : May 24, 2019, 10:43 PM IST

ಬ್ರಿಸ್ಟೋಲ್​: ಐಸಿಸಿ ವಿಶ್ವಕಪ್​​ನ ಅಭ್ಯಾಸ ಪಂದ್ಯಗಳು ಇಂದಿನಿಂದ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲಿ ಕ್ರಿಕೆಟ್​ ಶಿಶು ಮಾಜಿ ವಿಶ್ವ ಚಾಂಪಿಯನ್ ಪಾಕಿಸ್ತಾನಕ್ಕೆ ಟಾಂಗ್​ ನೀಡಿದೆ.

ಲಂಡನ್​ನ ಬ್ರಿಸ್ಟೋಲ್​​ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ​ ತಂಡ ಬಾಬರ್​ ಅಜಂ(112)ರನ್​ಗಳ ನೆರವಿನಿಂದ 47.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 262 ರನ್​ಗಳಿಕೆ ಮಾಡಿತ್ತು. ಶೋಯೆಬ್​ ಮಲಿಕ್​ 44 ಹಾಗೂ ಇಮಾಮ್​ ಹಕ್​ 32 ರನ್ ​ಗಳಿಕೆ ಮಾಡಿದರು.

ಸ್ಕೋರ್‌ ಬೆನ್ನತ್ತಿದ್ದ ಕ್ರಿಕೆಟ್​ ಶಿಶು ಆಫ್ಘಾನ್ ತಂಡ​ 49.4 ಓವರ್​ಗಳಲ್ಲಿ 7 ವಿಕೆಟ್​ನಷ್ಟಕ್ಕೆ 263 ರನ್ ​ಗಳಿಸಿ3 ವಿಕೆಟ್‌ಗಳ ಗೆಲುವಿನ ನಗೆ ಬೀರಿದೆ. ಉತ್ತಮ ಆರಂಭ ಪಡೆದ ತಂಡ ಕೊನೆಯದಾಗಿ ಮೇಲಿಂದ ಮೇಲೆ ವಿಕೆಟ್​ ಕಳೆದುಕೊಂಡರೂ ಹಸಮತುಲ್ಲಾ ಅಜೇಯ (74) ರನ್​ಗಳ ನೆರವಿನಿಂದ ಗೆಲುವಿನ ದಡ ಸೇರಿತು.

ಇವರಿಗೆ ಹಝರತುಲ್ಲಾ(49), ಮೊಹಮ್ಮದ್​ ನಬಿ(34) ಉತ್ತಮ ಸಾಥ್​ ನೀಡಿದರು. ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದ್ದ ಪಾಕ್‌ ತಂಡ ಕ್ರಿಕೆಟ್​ ಶಿಶುಗಳನ್ನ ಕಟ್ಟಿ ಹಾಕುವಲ್ಲಿ ವಿಫಲವಾಗಿದ್ದು ಮಾತ್ರ ವಿಪರ್ಯಾಸವೇ ಸರಿ. ಪಾಕ್​ ಪರ ವಹಾಬ್ ರಿಯಾಜ್​ ಮೂರು ವಿಕೆಟ್​ ಪಡೆದರು. ಆಫ್ಘಾನಿಸ್ತಾನದ ಮೊಹಮ್ಮದ್ ನಬಿ ಕೂಡ ಮೂರು ವಿಕೆಟ್​ ಪಡೆದುಕೊಂಡರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.