ETV Bharat / briefs

ಕೋವಿಡ್​ ವಾರ್ಡ್​ಗೆ ತೆರಳಿ ಕಟಿಂಗ್​ - ಶೇವಿಂಗ್: ಯುವಕನ ಕಾರ್ಯಕ್ಕೆ ಶ್ಲಾಘನೆ

author img

By

Published : Jun 7, 2021, 7:35 PM IST

Updated : Jun 7, 2021, 9:39 PM IST

ಕೋವಿಡ್ ಸೋಂಕಿತರ ಬಳಿ ಸುಳಿಯಲು ಜನ ಭಯ ಪಡುತ್ತಾರೆ. ಆದರೆ, ಇಲೊಬ್ಬ ಕ್ಷೌರಿಕ ಆಸ್ಪತ್ರೆಯ ಕೋವಿಡ್ ವಾರ್ಡ್​ಗೆ ತೆರಳಿ ಸೋಂಕಿತರಿಗೆ ಹೇರ್​ಕಟ್​, ಶೇವಿಂಗ್ ಮಾಡುವ ಮೂಲಕ ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

  A young man doing haircut to the corona infected people in hospital

ಗಂಗಾವತಿ: ಹೇಳಿ ಕೇಳಿ ಕೋವಿಡ್ ಸೋಂಕಿತರ ಬಳಿ ಸುಳಿಯಲು ಜನ ಭಯ ಪಡುತ್ತಾರೆ. ಆದರೆ, ಇಲ್ಲೊಬ್ಬ ಕ್ಷೌರಿಕ ನೇರವಾಗಿ ಆಸ್ಪತ್ರೆಯ ಕೋವಿಡ್ ವಾರ್ಡ್​ಗೆ ತೆರಳಿ ಸೋಂಕಿತರಿಗೆ ತಲೆಗೂದಲು ಕಟಿಂಗ್ ಮಾಡುವ ಮೂಲಕ ಹಾಗೂ ಶೇವಿಂಗ್ ಮಾಡುವ ಮೂಲಕ ಗಮನ ಸಳೆದಿದ್ದಾರೆ.

ಯುವಕನ ಕಾರ್ಯಕ್ಕೆ ಶ್ಲಾಘನೆ

ನಗರದ ಜಯನಗರ ರಸ್ತೆಯಲ್ಲಿನ ಈದ್ಗಾ ಕಾಂಪ್ಲೆಕ್ಸ್ ಮುಂದಿರುವ ಸ್ಟೈಲ್ಜೋನ್ ಹೇರ್ ಸೆಲೂನ್​ನ ಕ್ಷೌರಿಕ ಸುರೇಶ್​ ಎಂಬುವವರು, ಪಿಪಿಇ ಕಿಟ್ ಧರಿಸಿ ನೇರವಾಗಿ ಆಸ್ಪತ್ರೆಗೆ ಹೋಗಿ ಅಲ್ಲಿನ ಕೋವಿಡ್ ಸೋಂಕಿತರಿಗೆ ಹೇರ್​ ಕಟ್​ ಹಾಗೂ ಶೇವಿಂಗ್ ಮಾಡಿದ್ದಾರೆ.

ಕಳೆದ ಎರಡು ವಾರದಿಂದ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಗುಣಮುಖರಾಗುತ್ತಿದ್ದು, ದೈಹಿಕವಾಗಿ ಅನಾರೋಗ್ಯಕ್ಕೆ ಈಡಾಗಿದ್ದ ಕೆಲವರಿಗೆ ಸ್ವಚ್ಛತೆ ಅಗತ್ಯ ಮನಗಂಡ ಆಸ್ಪತ್ರೆ ಸಿಬ್ಬಂದಿ ಕ್ಷೌರ ಮಾಡಿಸಿಕೊಳ್ಳಲು ಅವಕಾಶ ನೀಡಿದ್ದರು. ಈ ಹಿನ್ನೆಲೆ ಕ್ಷೌರಿಕ ಸುರೇಶ್​ ಹಾಗೂ ಸಹಾಯಕರೊಬ್ಬರು ನೇರವಾಗಿ ಪಿಪಿಇ ಕಿಟ್ ಧರಿಸಿ ಸೋಂಕಿತರಿಗೆ ಕ್ಷೌರ ಮಾಡಿದ್ದಾರೆ.

ಕ್ಷೌರಿಕನ ಈ ಕಾರ್ಯ ಮೆಚ್ಚಿ ವ್ಯಕ್ತಿಯೊಬ್ಬರು ನಗದು ನೀಡಿದರು, ಇನ್ನು ಆಸ್ಪತ್ರೆಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

Last Updated : Jun 7, 2021, 9:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.