ಚಿಕ್ಕಮಗಳೂರು: ಹಣದ ವಿಚಾರಕ್ಕೆ ನಡು ರಸ್ತೆಯಲ್ಲೇ ಸಂಬಂಧಿಕರು ಹಲ್ಲೆ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ.
ಕೂಲಿ ಕೆಲಸ ಮಾಡಿರುವ ವೆಂಕಟೇಶ್ - ಸುಧಾ ದಂಪತಿ ತಮ್ಮ ಸಂಬಂಧಿಕರಲ್ಲಿ ಹಣ ಕೇಳಿದ್ದರಂತೆ. ಆಯ್ತು ಬನ್ನಿ ಕೂಲಿ ಕೊಡುವುದಾಗಿ ದಂಪತಿಯನ್ನು ಕರೆಯಿಸಲಾಗಿದ್ದು ಅವರ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹೌಸಿಂಗ್ ಬೋರ್ಡ್‌ನ ಸಾಲು ಮರದಮ್ಮ ದೇವಸ್ಥಾನ ಬಳಿ ಈ ಜಗಳ ನಡೆದಿದ್ದು, ವೆಂಕಟೇಶ ಸಂಬಂಧಿಕ ಧರ್ಮ ಎಂಬಾತ ಹಲ್ಲೆ ಮಾಡಿದ್ದಾನೆ ಎಂದು ದೂರಲಾಗಿದೆ. ಈ ಘಟನೆಯಲ್ಲಿ ಹಲ್ಲೆಗೊಳಗಾದ ವೆಂಕಟೇಶ್ ಹಾಗೂ ಸುಧಾ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಧರ್ಮ ಅವರ ಹಂದಿ ಫಾರ್ಮ್‌ನಲ್ಲಿ ವೆಂಕಟೇಶ್ ಕೆಲಸ ಮಾಡುತ್ತಿದ್ದರು. ವೆಂಕಟೇಶ್ ಆರು ತಿಂಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈ ಹಿಂದೆ ಕೆಲಸ ಮಾಡಿದ್ದಕ್ಕೆ ಹಣ ಕೇಳಲು ಹೋದಾಗ ಧರ್ಮ ಹಾಗೂ ಅವರ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ದಂಪತಿ ಆರೋಪಿಸಿದ್ದಾರೆ.
ನಗರ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.