ನವದೆಹಲಿ: ಸಿಖ್ ವಿರೋಧಿ ದಂಗೆಯ ಕುರಿತಾದ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾರ ವಿವಾದಿತ ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ್ದಾರೆ.
ಸ್ಯಾಮ್ ಪಿತ್ರೋಡಾ ಮಾತನಲ್ಲಿ ಗೆರೆ ಮೀರಿದ್ದಾರೆ. ಅದಕ್ಕಾಗಿ ಅವರು ಕ್ಷಮೆ ಕೇಳಬೇಕು. 1984ರ ದಂಗೆ ಅಸಾಧ್ಯ ನೋವನ್ನು ನೀಡಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹೆಚ್ಚಿನ ಓದಿಗಾಗಿ:
ಸಿಖ್ ವಿರೋಧಿ ದಂಗೆ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ಸ್ಯಾಮ್ ಪಿತ್ರೋಡಾ
1984ರ ಸಿಖ್ ವಿರೋಧ ದಂಗೆಯಂತಹ ಘಟನೆಗಳ ನಡೆಯಲೇಬಾರದು. ಇಂತಹ ಘಟನೆಯನ್ನು ಸಾಮಾನ್ಯ ಎನ್ನುವ ಅರ್ಥದಲ್ಲಿ ಹೇಳಿದ ಪಿತ್ರೋಡಾರ ಮಾತನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ವಪಕ್ಷೀಯ ನಾಯಕನಿಗೆ ರಾಗಾ ಹೇಳಿದ್ದಾರೆ.