ETV Bharat / briefs

12 ವರ್ಷದ ಬಾಲಕ ಸೇರಿ ಗದಗದಲ್ಲಿಂದು 6 ಕೊರೊನಾ ಕೇಸ್​ ಪತ್ತೆ - ಗದಗ ಕೊರೊನಾ ವೈರಸ್ ಪ್ರಕರಣಗಳು

ಇಂದು ಮತ್ತೆ ಗದಗ ಜಿಲ್ಲೆಯಲ್ಲಿ ಮುಂಬೈನಿಂದ ಬಂದ ವಲಸೆ ಕಾರ್ಮಿಕರ ಪೈಕಿ 6 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

6 more corona cases found in gadag
6 more corona cases found in gadag
author img

By

Published : Jun 8, 2020, 8:29 PM IST

ಗದಗ: ಜಿಲ್ಲೆಯಲ್ಲಿ ಇಂದು ಮತ್ತೆ 12 ವರ್ಷದ ಬಾಲಕ ಸೇರಿ 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇದರಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ಇರುವುದು ಆತಂಕ ಹೆಚ್ಚಿಸಿದೆ. ನಿನ್ನೆ ಭಾನುವಾರ ಇವರ ಸ್ವ್ಯಾಬ್ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. 30 ವರ್ಷದ ಮಹಿಳೆ ಪಿ-5486, 22 ವರ್ಷದ ಪುರುಷ ಪಿ-5487, 42 ವರ್ಷದ ಮಹಿಳೆ ಪಿ-5488, 46 ವರ್ಷದ ಪುರುಷ ಪಿ-5489, 12 ವರ್ಷದ ಬಾಲಕ ಪಿ-5490 , 23 ವರ್ಷದ ಮಹಿಳೆ ಪಿ-5491 ಎಂದು ಗುರುತಿಸಲಾಗಿದೆ.

ಸೋಂಕಿತರನ್ನು ಗದಗ ಜಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಐದು ಜನ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿಗಳಾಗಿದ್ದು, ಓರ್ವ ಗದಗದ ನಿವಾಸಿಯಾಗಿದ್ದಾರೆ.

ಇವರೆಲ್ಲಾ ಮಹಾರಾಷ್ಟ್ರದಿಂದ ಬಂದವರು. ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 47ಕ್ಕೇರಿದೆ. ಇದರಲ್ಲಿ 33 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಬ್ಬರು ಮೃತಪಟ್ಟು, ಇನ್ನುಳಿದ 14 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.