ಲಂಡನ್: 1975ರಿಂದ ಆರಂಭಗೊಂಡಿರುವ ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಇಲ್ಲಿಯವರೆಗೂ 11 ಮಹಾ ಟೂರ್ನಿಗಳು ನಡೆದಿದ್ದು, ಒಟ್ಟು 20 ತಂಡಗಳು ಭಾಗಿಯಾಗಿವೆ. ಆಸ್ಟ್ರೇಲಿಯಾ 5 ಬಾರಿ ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿದರೆ, ವೆಸ್ಟ್ ವಿಂಡೀಸ್ ಹಾಗೂ ಭಾರತ ತಲಾ 2 ಸಲ ಈ ಪ್ರತಿಷ್ಠಿತ ಪ್ರಶಸ್ತಿಗೆ ಮುತ್ತಿಟ್ಟಿವೆ.
ವಿಶ್ವಕಪ್ನಲ್ಲಿ ಭಾಗಿಯಾಗಬೇಕೆಂಬುದು ವಿಶ್ವದ ಎಲ್ಲ ಕ್ರಿಕೆಟ್ ತಂಡಗಳ ಮಹದಾಸೆ. ಈ ಮಹತ್ವಾಕಾಂಕ್ಷಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕು ಎಂಬ ಆಸೆ ಹೊತ್ತು ಈ ಹಿಂದೆ ಭಾಗಿಯಾಗಿದ್ದ ನಾಲ್ಕು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳು ಮಾತ್ರ ಯಾವುದೇ ಗೆಲುವು ದಾಖಲಿಸದೆ ಬರಿಗೈಯಲ್ಲಿ ತೆರಳಿರುವುದು ವಿಪರ್ಯಾಸದ ಸಂಗತಿ.
ಸ್ಕಾಟ್ಲೆಂಡ್:
1999, 2007 ಹಾಗೂ 2015ರಲ್ಲಿ ಈ ತಂಡ ವಿಶ್ವಕಪ್ನಲ್ಲಿ ಪಾಲ್ಗೊಂಡಿತ್ತು. ಈ ಮೂರೂ ಟೂರ್ನಿಗಳಿಂದ ಒಟ್ಟು 14 ಪಂದ್ಯಗಳನ್ನಾಡಿದ ಈ ತಂಡ ಯಾವುದೇ ಪಂದ್ಯದಲ್ಲೂ ಗೆದ್ದಿಲ್ಲ. 2015ರಲ್ಲಿ ಆಫ್ಘಾನಿಸ್ತಾನದ ವಿರುದ್ಧ ಸ್ಕಾಟ್ಲೆಂಡ್ ಗೆಲುವಿನ ಸನಿಹ ಬಂದು ಮ್ಯಾಚ್ ಕೈಚೆಲ್ಲಿತ್ತು.
ಬರ್ಮುಡಾ:
2007ರ ವಿಶ್ವಕಪ್ನಲ್ಲಿ ಭಾಗಿಯಾಗಿದ್ದ ಈ ತಂಡ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ವಿರುದ್ಧ ಪಂದ್ಯಗಳನ್ನಾಡಿತ್ತು. ಎಲ್ಲಾ ಪಂದ್ಯಗಳಲ್ಲೂ ಸೋಲು ಕಂಡು ನಿರಾಸೆ ಅನುಭವಿಸಿದ ಬರ್ಮುಡಾ ಮುಂದೆ ಯಾವುದೇ ಟೂರ್ನಿಗಳಲ್ಲಿ ಭಾಗಿಯಾಗಲಿಲ್ಲ.
ನಮೀಬಿಯಾ:
2003ರ ವಿಶ್ವಕಪ್ನಲ್ಲಿ ಭಾಗಿಯಾಗಿದ್ದ ಆಫ್ರಿಕಾ ಖಂಡದ ತಂಡ ನಮೀಬಿಯಾ, ಯಾವುದೇ ಪಂದ್ಯದಲ್ಲೂ ಗೆಲುವು ದಾಖಲಿಸಲಿಲ್ಲ. 2003ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ ಪಂದ್ಯವನ್ನು 86 ರನ್ಗಳಿಂದ ಸೋಲು ಅನುಭವಿಸಿತ್ತು. ಅದಾದ ಬಳಿಕ ಪಾಕ್,ಇಂಗ್ಲೆಂಡ್, ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧವೂ ಸೋಲು ಕಂಡಿತ್ತು.
ಪೂರ್ವ ಆಫ್ರಿಕಾ:
1975ರ ವಿಶ್ವಕಪ್ನಲ್ಲಿ ಭಾಗಿಯಾಗಿದ್ದ ಪೂರ್ವ ಆಫ್ರಿಕಾ ತಂಡವೂ ತನ್ನ ಅಭಿಯಾನದಲ್ಲಿ ಯಾವುದೇ ಪಂದ್ಯ ಗೆದ್ದಿಲ್ಲ. ನ್ಯೂಜಿಲೆಂಡ್, ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿತ್ತು.