ಕೋಲ್ಕತ್ತಾ: ಲೋಕಸಭಾ ಚುನಾವಣೆ ಮುಕ್ತಾಯವಾಗಿ ಎರಡು ದಿನಗಳಾಗಿದ್ದು ಪಶ್ಚಿಮ ಬಂಗಾಳದಲ್ಲಿ ಮತ್ತೆ ಗಲಾಟೆ ನಡೆದಿದೆ.
ಎಲ್ಲ ಹಂತದ ಮತದಾನದ ವೇಳೆಯೂ ಸಾಕಷ್ಟು ಹಿಂಸಾಚಾರದಿಂದ ಸುದ್ದಿಯಾಗಿದ್ದ ದೀದಿ ನಾಡಲ್ಲಿ ಸೋಮವಾರ ತಡರಾತ್ರಿ ಕೂಚ್ ಬೆಹಾರ್ನ ಸಿತೈನಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಗಲಾಟೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಗುಂಡಿನ ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಜೆಪಿ ಸೇರಿದ್ದ ಅಂಗಡಿಯೊಂದು ಗಲಾಟೆಯಲ್ಲಿ ಹಾನಿಯಾಗಿದೆ.
ಸಣ್ಣಪುಟ್ಟ ಹಿಂಸಾಚಾರದಿಂದ ಕೂಡಿದ್ದ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಮಿತ್ ಶಾ ರೋಡ್ಶೋ ವೇಳೆ ನಡೆದ ಗಲಭೆ ಮತ್ತಷ್ಟು ತುಪ್ಪ ಸುರಿದಿತ್ತು. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು.