ETV Bharat / briefs

2ನೇ ಡೋಸ್ ಲಸಿಕೆ ಪಡೆಯಲು 27 ಕೋವಿಡ್ ಲಸಿಕಾ ಕೇಂದ್ರ ಮೀಸಲು : ಗೌರವ್ ಗುಪ್ತಾ - ಬಿಬಿಎಂಪಿ ವ್ಯಾಪ್ಯಿಯಲ್ಲಿ ವ್ಯಾಕ್ಸಿನೇಷನ್​

27 ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕೋವಿಡ್ ಲಸಿಕಾ ಕೇಂದ್ರವನ್ನು ಮೀಸಲಿಡಲಾಗಿದೆ. ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಪಡೆಯಲು ಈ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ..

 Vaccine Center Reserve
Vaccine Center Reserve
author img

By

Published : May 30, 2021, 8:34 PM IST

ಬೆಂಗಳೂರು : ನಗರದಲ್ಲಿ ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಪಡೆಯಲು ಪಾಲಿಕೆ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಕೋವಿಡ್ ಲಸಿಕಾ ಕೇಂದ್ರವನ್ನು ಬಿಬಿಎಂಪಿ ಮೀಸಲಿಟ್ಟಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ 15 ದಿನಗಳಿಂದ ಕೋವ್ಯಾಕ್ಸಿನ್ ಲಸಿಕೆ ಸರಬರಾಜು ವ್ಯತ್ಯಯ ಉಂಟಾಗಿತ್ತು. ಹೀಗಾಗಿ, ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದ 45 ದಿನಗಳ ನಂತರ 2ನೇ ಡೋಸ್ ಲಸಿಕೆ ಪಡೆಯುವವರು ಲಸಿಕೆ ಸಿಗದೆ ಪರದಾಡುವಂತಾಗಿತ್ತು.

ಯಾವ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ ಎಂಬುದನ್ನು ತಿಳಿಯಲಾಗದೆ ಮೊದಲ ಡೋಸ್ ಪಡೆದವರು ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗ ಪಾಲಿಕೆ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರದಲ್ಲಿಯೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ.

 Vaccine Center Reserve
Vaccine Center Reserve

ಜತೆಗೆ, ಲಸಿಕೆ ಪಡೆಯುವಲ್ಲಿ ಸಮಸ್ಯೆ ಕಂಡು ಬಂದಲ್ಲಿ ಸಹಾಯವಾಣಿ 9448055948ಗೆ ಸಂದೇಶ ಕಳುಹಿಸಿ ಪರಿಹಾರ ಪಡೆಯಬಹುದು ಎಂದು ಆಯುಕ್ತ ಗೌರವ್ ಗುಪ್ತಾ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವಲಯಗಳು ಮತ್ತು ಆಸ್ಪತ್ರೆಗಳ ವಿವರ:

  • ಬೆಂಗಳೂರು ದಕ್ಷಿಣ: ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರ
  • ಬೊಮ್ಮನಹಳ್ಳಿ: ಅರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ
  • ದಾಸರಹಳ್ಳಿ: ನೆಲಮಹೇಶ್ವರಿ ಪ್ರಾಥಮಿಕ ಆರೋಗ್ಯ ಕೇಂದ್ರ
  • ಸಿ.ವಿ.ರಾಮನ್ ನಗರ : ಸಿ.ವಿ. ರಾಮನ್ ಸರ್ಕಾರಿ ಆಸ್ಪತ್ರೆ
  • ಹೆಬ್ಬಾಳ: ಗಂಗಾನಗರ ಪ್ರಾಥಮಿಕ ಆರೋಗ್ಯ ಕೇಂದ್ರ
  • ಪುಲಿಕೇಶಿನಗರ : ರಾಬರ್ಟ್‌ಸನ್ ಬೀದಿಯ ಪ್ರಾಥಮಿಕ ಆರೋಗ್ಯ ಕೇಂದ್ರ
  • ಸರ್ವಜ್ಞನಗರ: ಕಾಚರಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ
  • ಶಾಂತಿನಗರ - ಅಂಬೇಡ್ಕರ್ ಪ್ರಾಥಮಿಕ ಆರೋಗ್ಯ ಕೇಂದ್ರ
  • ಶಾಂತಲಾನಗರ
  • ಶಿವಾಜಿನಗರ : ಬೌರಿಂಗ್ ಸರ್ಕಾರಿ ಆಸ್ಪತ್ರೆ
  • ಕೆ.ಆರ್. ಪುರಂ: ಕೆ.ನಾರಾಯಣಪುರ ಪ್ರಾಥಮಿಕ ಆರೋಗ್ಯ ಕೇಂದ್ರ
  • ಮಹದೇವಪುರ: ದೊಡ್ಡನೆಕ್ಕುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ
  • ಆರ್.ಆರ್. ನಗರ: ಮತ್ತಿಕೆರೆ ನ.ಪ್ರಾಥಮಿಕ ಆರೋಗ್ಯ ಕೇಂದ್ರ
  • ಯಶವಂತಪುರ: ಕೆಂಗೇರಿ ಆಸ್ಪತ್ರೆ
  • ಬಸವನಗುಡಿ: ವಿದ್ಯಾಪೀಠ ಪ್ರಾಥಮಿಕ ಆರೋಗ್ಯ ಕೇಂದ್ರ
  • ಬಿಟಿಎಂ ಲೇಔಟ್ - ಆಡುಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರ
  • ಚಿಕ್ಕಪೇಟೆ : ದಾಸಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ
  • ಜಯನಗರ : ಜಯನಗರ ಸರ್ಕಾರಿ ಆಸ್ಪತ್ರೆ
  • ಪದ್ಮನಾಭನಗರ: ಕೆ.ಎಸ್. ಲೇಔಟ್ ಪ್ರಾಥಮಿಕ ಆರೋಗ್ಯ ಕೇಂದ್ರ
  • ವಿಜಯನಗರ: ಬಾಪೂಜಿನಗರ ಪ್ರಾಥಮಿಕ ಆರೋಗ್ಯ ಕೇಂದ್ರ
  • ಚಾಮರಾಜಪೇಟೆ: ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆ
  • ಗಾಂಧಿನಗರ : ಕೆ.ಜಿ. ಜನರಲ್ ಆಸ್ಪತ್ರೆ
  • ಗೋವಿಂದರಾಜನಗರ - ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ
  • ಮಹಾಲಕ್ಷ್ಮಿ ಲೇಔಟ್: ಶಂಕರನಗರ ಪ್ರಾಥಮಿಕ ಆರೋಗ್ಯ ಕೇಂದ್ರ
  • ಮಲ್ಲೇಶ್ವರ: ಪಿ.ಜಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ
  • ರಾಜಾಜಿನಗರ: ರಾಜಾಜಿನಗರ ಪ್ರಾಥಮಿಕ ಆರೋಗ್ಯ ಕೇಂದ್ರ
  • ಬ್ಯಾಟರಾಯನಪುರ: ತಿಂಡ್ಲು ಪ್ರಾಥಮಿಕ ಆರೋಗ್ಯ ಕೇಂದ್ರ
  • ಯಲಹಂಕ: ಎಂ.ಎಸ್. ಪಾಳ್ಯ ಸರ್ಕಾರಿ ಆಸ್ಪತ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.