ಮಂಗಳೂರು: ನಗರದ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯಲ್ಲಿ ಮೇ ಮೊದಲ ವಾರದಲ್ಲಿಯೇ 23 ಮಂದಿ ಕೊರೊನಾ ಸೋಂಕಿತ ಗರ್ಭಿಣಿಯರು ಹೆರಿಗೆಗಾಗಿ ದಾಖಲಾಗಿದ್ದಾರೆ.
ಇವರಲ್ಲಿ 17 ಮಂದಿ ಸೋಂಕಿತೆಯರಿಗೆ ಹೆರಿಗೆಯಾಗಿದ್ದು, ತಾಯಿ ಮಕ್ಕಳು ಸೌಖ್ಯವಾಗಿದ್ದಾರೆ. ಈ 17 ಮಂದಿಯಲ್ಲಿ 9 ಮಂದಿಗೆ ಸಿಸೇರಿಯನ್ ಆಗಿದ್ದು, ನಾಲ್ವರಿಗೆ ಮಾತ್ರ ನಾರ್ಮಲ್ ಹೆರಿಗೆ ಮಾಡಿಸಲಾಗಿದೆ. ಓರ್ವರಿಗೆ ಆ್ಯಂಬುಲೆನ್ಸ್ನಲ್ಲಿಯೇ ಹೆರಿಗೆಯಾಗಿದ್ದು, ಮೂವರಿಗೆ ಅಬಾರ್ಷನ್ ಆಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಮಾತನಾಡಿ, ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆಯಾಗಿದ್ದರೂ, ಅವರು ಕ್ವಾರಂಟೈನ್ಗೆ ಒಳಗಾಗುವುದು ಕಡ್ಡಾಯವಾಗಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 24 ಬೆಡ್ ಸಾಮರ್ಥ್ಯದ ಕೋವಿಡ್ ಮೆಟರ್ನಿಟಿ ಬ್ಲಾಕ್ ಮಾಡಲಾಗಿದ್ದು, ಸೋಂಕಿತೆ ಗರ್ಭಿಣಿಯರನ್ನು ಇಲ್ಲೇ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.