ETV Bharat / briefs

ಅಭ್ಯಾಸ ಪಂದ್ಯದಲ್ಲಿ ಮುಗ್ಗರಿಸಿದ ಭಾರತ,179ಕ್ಕೆ ಕೊಹ್ಲಿ ಟೀಂ ಆಲೌಟ್!

ಅಭ್ಯಾಸ ಪಂದ್ಯದಲ್ಲಿ ಭಾರತ 179 ರನ್​ಗಳಿಗೆ ಆಲೌಟ್​. ಕೀವಿಸ್​ಗೂ ಆರಂಭಿಕ ಆಘಾತ. 10 ಓವರ್​ಗಳಲ್ಲಿ 40ಕ್ಕೆ 2 ಕಳೆದುಕೊಂಡ ವಿಲಿಯಮ್ಸನ್​ ಪಡೆ.

ಭಾರತ
author img

By

Published : May 25, 2019, 7:42 PM IST

ಲಂಡನ್​: ಅಧಿಕೃತವಾಗಿ ಪಂದ್ಯಾವಳಿಗಳು ನಡೆಯೋದಕ್ಕೂ ಮುನ್ನ ನಡೆದ ವಿಶ್ವಕಪ್​ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಕಿವೀಸ್​ ಬೌಲರ್​ಗಳ ದಾಳಿಗೆ ಕಂಗೆಟ್ಟು ಕೇವಲ 179 ರನ್​ಗಳಿಗೆ ಸರ್ವಪತನ ಕಂಡಿದೆ.

ಲಂಡನ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಕಿವೀಸ್​ ಬೌಲರ್‌ಗಳ ದಾಳಿಗೆ ಕುಸಿದು 39.2 ಓವರ್​ಗಳಲ್ಲಿ 179 ರನ್​ಗಳಿಗೆ ಕುಸಿತ ಕಂಡಿತು.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ 2, ಧವನ್​ 2 ಹಾಗೂ ರಾಹುಲ್ 6 ರನ್​ ಗಳಿಸಿ ​ ಟ್ರೆಂಟ್​ ಬೌಲ್ಟ್​ಗೆ ವಿಕೆಟ್​ ಒಪ್ಪಿಸಿದರು. ಕೊಹ್ಲಿ ಆಟ 18ಕ್ಕೆ ಸೀಮಿತವಾದರೆ, ಹಾರ್ದಿಕ್​ 30 ರನ್ ​ಗಳಿಸಿ ತಂಡವನ್ನು ದಿಢೀರ್ ಕುಸಿತದಿಂದ ಪಾರು ಮಾಡಿದರು. ನಂತರ ಬಂದ ಕಾರ್ತಿಕ್​ 4 ರನ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಧೋನಿ 17 , ಜಡೇಜಾ 54 , ಕುಲ್ದೀಪ್​ ಯಾದವ್​ 19 ರನ್​ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು.

ಟ್ರೆಂಟ್​ ಬೌಲ್ಟ್​ 4 ವಿಕೆಟ್​, ನಿಶಾಮ್​ 3 ವಿಕೆಟ್, ಸೌಥಿ, ಗ್ರ್ಯಾಂಡ್​ಹೋಮ್​ ಹಾಗು ಲೂಕಿ ಫರ್ಗ್ಯುಶನ್​ ತಲಾ ಒಂದು ವಿಕೆಟ್​ ಪಡೆದರು.

ಎರಡನೇ ಇನಿಂಗ್ಸ್​ ಆರಂಭಿಸಿರುವ ನ್ಯೂಜಿಲೆಂಡ್​ 7 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 29 ರನ್ ​ಗಳಿಸಿದೆ.

ಸಾಧಾರಣ ಮೊತ್ತ ಬೆನ್ನತ್ತಿದ ಕಿವೀಸ್‌, ಮಾರ್ಟಿನ್​ ಗಪ್ಟಿಲ್(​ 22) ಹಾಗೂ 4 ರನ್​ ಗಳಿಸಿದ್ದ ಮನ್ರೊ ವಿಕೆಟ್​ ಕಳೆದುಕೊಂಡಿದೆ. ವಿಲಿಯಮ್ಸನ್​ 17 ರನ್​ ಹಾಗೂ ರಾಸ್​ ಟೇಲರ್​ 5 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

Intro:Body:Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.