ಮುಂಬೈ: 1971ರ ಬಾಂಗ್ಲಾ ವಿಮೋಚನಾ ಯುದ್ಧದ ಹೀರೊ ಆಗಿ ಹೊರಹೊಮ್ಮಿದ್ದ ಕ್ಯಾಪ್ಟನ್ ಎಂ.ಎನ್ ಸಮಂತ್ ಅವರು ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಸಮಂತ್ ಅವರು ಮುಂಬೈನಲ್ಲಿನ ಅವರ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಮೊಂಗ್ಲಾ ಹಾಗೂ ಖುಲ್ನಾ ಕರಾವಳಿ ಬಂದರುಗಳನ್ನು ಪಾಕ್ ಪಡೆಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾಗ ವೈರಿ ಪಡೆಗಳ ಮೇಲೆ ದಿಢೀರನೆ ದಾಳಿ ನಡೆಸಿದ ಕ್ಯಾಪ್ಟನ್ ಸಮಂತ್ ನೇತೃತ್ವದ ಪಡೆಯು ಮೊದಲು ಮೊಂಗ್ಲಾದಲ್ಲಿರುವ ಶತ್ರುಪಡೆಯನ್ನು ಸರ್ವನಾಶ ಮಾಡಿತು.
ಶತ್ರುಪಡೆಗಳ ನಿರಂತರ ದಾಳಿಯನ್ನು ಸಮರ್ಥವಾಗಿ ಎದುರಿಸುವ ಜತೆಗೆ ತಮ್ಮ ಸ್ಕ್ವಾಡ್ರನ್ಅನ್ನು ರಕ್ಷಿಸಿದ ಸಮಂತ್ ಅವರು ಖುಲ್ನಾ ನೌಕಾ ನೆಲೆಯ ಮೇಲೂ ದಾಳಿ ನಡೆಸಿ ಪಾಕ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದರು ಎಂದು ತಿಳಿದುಬಂದಿದೆ.
ಸಮಂತ್ ಅವರ ಶೌರ್ಯವನ್ನು ಮೆಚ್ಚಿ ಅವರಿಗೆ ಮಹಾವೀರ ಚಕ್ರ ನೀಡಲಾಗಿತ್ತು.