ಬೀದರ್: ಜಿಲ್ಲೆಯಲ್ಲಿಂದು 14 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 298ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಮಹಾರಾಷ್ಟ್ರ ಸೋಂಕು ಹೆಚ್ಚುತ್ತಲೇ ಇದ್ದು, ಬಸವಕಲ್ಯಾಣ ತಾಲೂಕಿನಲ್ಲಿಯೇ 13 ಜನರು ಹಾಗೂ ಹುಮನಾಬಾದ್ ತಾಲೂಕಿನಲ್ಲಿ 1 ಪ್ರಕರಣ ಪತ್ತೆಯಾಗಿದೆ.
ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರಗಾಂವ್ ತಾಂಡ-04, ಬಸವಕಲ್ಯಾಣ ನಗರದ ಕೈಕಾಡಿಗಲ್ಲಿ-01, ಹೊಸಪೇಟ ಗಲ್ಲಿ-01, ಧನ್ನೂರವಾಡಿ-01, ಕಿಟ್ಟಾ-03 ಹಾಗೂ ರಾಜೇಶ್ವರ ಗ್ರಾಮದಲ್ಲಿ ಒಂದು ಪ್ರಕರಣ ದೃಢವಾಗಿದೆ. ಹುಮನಾಬಾದ್ ತಾಲೂಕಿನ ಗಡವಂತಿ ಗ್ರಾಮದಲ್ಲಿ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸದ್ಯ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
30 ಜನ ಗುಣಮುಖ
ಜಿಲ್ಲೆಯಲ್ಲಿಂದು 30 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟು 181 ಜನ ಗುಣಮುಖರಾಗಿದ್ದು, 6 ಜನ ಸಾವನ್ನಪ್ಪಿದ್ದಾರೆ.
ಬೀದರ್ನಲ್ಲಿ ಮತ್ತೆ 14 ಜನರಿಗೆ ಕೊರೊನಾ: 298ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ - ಬೀದರ್ ಕೊರೊನಾ ವೈರಸ್ ಪ್ರಕರಣಗಳು
ಮಹಾರಾಷ್ಟ್ರ ವಲಸಿಗರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದ್ದು, ಬೀದರ್ ಜಿಲ್ಲೆಯಲ್ಲಿಂದು 14 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.