ETV Bharat / bharat

ಲಾಕ್​ಡೌನ್​ 4.0 ಜಾರಿ?: ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ - ನಮೋ ಭಾಷಣ

PM to address nation at 8 pm
PM to address nation at 8 pm
author img

By

Published : May 12, 2020, 12:20 PM IST

Updated : May 12, 2020, 1:16 PM IST

12:17 May 12

ಇಂದು ರಾತ್ರಿ 8 ಗಂಟೆಗೆ ನಮೋ ಭಾಷಣ

ನವದೆಹಲಿ: ದೇಶದಲ್ಲಿ ಹೇರಿಕೆ ಮಾಡಿರುವ ಲಾಕ್​ಡೌನ್​ 3.0 ಮೇ. 17ಕ್ಕೆ ಮುಕ್ತಾಯಗೊಳ್ಳಲಿದೆ. ಇದೇ ವಿಷಯವಾಗಿ ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡುವ ಭಾಷಣ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಕೊರೊನಾ ವೈರಸ್​ ಕಾರಣ ದೇಶದಲ್ಲಿ ಮೂರನೇ ಹಂತದ ಲಾಕ್​ಡೌನ್​ ಜಾರಿಯಲ್ಲಿದ್ದು, ಅದು ಮುಕ್ತಾಯಗೊಳ್ಳಲು ಕೇವಲ ಐದು ದಿನಗಳು ಬಾಕಿ ಉಳಿದಿವೆ. ಈ ಕುರಿತಾಗಿ ನಿನ್ನೆ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್​​ ಮೂಲಕ ಮಾಹಿತಿ ಪಡೆದುಕೊಂಡಿದ್ದರು. 

ಪ್ರಧಾನಿ ಭಾಷಣದ ಹಿನ್ನೆಲೆಯಲ್ಲಿ, ದೇಶದಲ್ಲಿ ಲಾಕ್​ಡೌನ್ 4.0 ಜಾರಿಯಾಗುತ್ತಾ?​ ಹೊಸ ಕಾರ್ಯಸೂಚಿ ಜತೆ ಲಾಕ್​ಡೌನ್​​ ಸಡಿಲಿಕೆಯಾಗುವುದೇ? ಎಂಬ ಮಾತುಗಳು ಸದ್ಯ ಎಲ್ಲೆಡೆ ಕೇಳಿ ಬರುತ್ತಿವೆ.

ನಿನ್ನೆ ನಡೆದ ವಿಡಿಯೋ ಕಾನ್ಫರೆನ್ಸ್​ ವೇಳೆ ಕೆಲ ರಾಜ್ಯಗಳು ಲಾಕ್​ಡೌನ್​ ಸಡಿಲಿಕೆ ಮಾಡುವಂತೆ ಪ್ರಾಧಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, ಕೇವಲ ನಿರ್ಬಂಧಿತ​​ ವಲಯಗಳಲ್ಲಿ ಕರ್ಫ್ಯೂ ವಿಧಿಸಿ, ಉಳಿದೆಡೆ ಆರ್ಥಿಕ ಚಟುವಟಿಕೆ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿವೆ. 

ದೇಶದಲ್ಲಿ ಈಗಾಗಲೇ ಕೊರೊನಾವೃತ ಪ್ರದೇಶಗಳನ್ನು ಹಸಿರು​, ಕಿತ್ತಳೆ, ಕೆಂಪು ವಲಯಗಳೆಂದು ವರ್ಗೀಕರಿಸಲಾಗಿದೆ. ಈ ವರ್ಗೀಕರಣಕ್ಕೆ ಅನುಗುಣವಾಗಿ ಲಾಕ್‌ ಡೌನ್‌‌ ಸಡಿಲಿಕೆ ನೀಡಲಾಗಿದೆ.

Last Updated : May 12, 2020, 1:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.