ETV Bharat / bharat

ಫುಡ್​ ಡೆಲಿವರಿ ಬದಲು ಬಿಯರ್​ ಡಿಲೆವೆರಿ: ಪೊಲೀಸರ ಬಳಿ ತಗ್ಲಾಕ್ಕೊಂಡ ಜೊಮಾಟೊ ಬಾಯ್​

author img

By

Published : May 27, 2021, 7:54 PM IST

ಫುಡ್​ ಡಿಲಿವರಿ ಮಾಡುವ ಬದಲು ಬಿಯರ್​ ಡಿಲೆವೆರಿ ಮಾಡುತ್ತಿದ್ದ ಜೊಮಾಟೊ ಬಾಯ್​ ಚೆನ್ನೈ ಪೊಲೀಸರ ಅತಿಥಿಯಾಗಿದ್ದಾನೆ

ಫುಡ್​ ಡಿಲೆವೆರಿ ಬದಲು ಬಿಯರ್​ ಡಿಲೆವೆರಿ
ಫುಡ್​ ಡಿಲೆವೆರಿ ಬದಲು ಬಿಯರ್​ ಡಿಲೆವೆರಿ

ಚೆನ್ನೈ:ಫುಡ್​ ಡೆಲಿವರಿ ಮಾಡುವ ನೆಪದಲ್ಲಿ ಬಿಯರ್ ಬಾಟಲ್​ಗಳನ್ನು ತಲುಪಿಸುತ್ತಿದ್ದ ಜೊಮಾಟೊ ಉದ್ಯೋಗಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಸಹಾಯಕ ಇನ್ಸ್‌ಪೆಕ್ಟರ್ ಕಾರ್ತಿಕೇಯನ್ ನೇತೃತ್ವದ ಪೊಲೀಸರು ನ್ಯೂ ಅವಾಡಿ ರಸ್ತೆಯ ಕೆಜಿ ರಸ್ತೆ ಜಂಕ್ಷನ್‌ನಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಆಹಾರದ ಪೆಟ್ಟಿಗೆಯಲ್ಲಿ 10 ಬಾಟಲ್ ಬಿಯರ್‌ ಇದ್ದದ್ದು ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಡೆಲಿವರಿ ಬಾಯ್​ ಪ್ರಸನ್ನ ವೆಂಕಟೇಶ್ ಎಂಬುವವನನ್ನು ಬಂಧಿಸಿ ಬಿಯರ್ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಮೇಕೆದಾಟು ಯೋಜನೆ ವಿವಾದ: ಕಾನೂನು ಹೋರಾಟಕ್ಕೆ ಮುಂದಾದ ರಾಜ್ಯ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.