ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯ ಬವ್‌ಧಾನ್‌ನಲ್ಲಿ 67 ವರ್ಷದ ವೃದ್ಧನಿಗೆ ಝಿಕಾ ವೈರಸ್ ಪತ್ತೆಯಾಗಿದೆ. ಆದರೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆ ವ್ಯಕ್ತಿ ಈಗ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಝಿಕಾ ವೈರಸ್ ಭಯಬೇಡ, ಮುನ್ನೆಚ್ಚರಿಕೆ ಅಗತ್ಯ.. ಇಲ್ಲಿವೆ ಕೆಲ ಉಪಯುಕ್ತ ಸಲಹೆಗಳು..
ಈ ವೃದ್ಧ ಮೂಲತಃ ನಾಸಿಕ್‌ನವರಾಗಿದ್ದು, ನವೆಂಬರ್ 6ರಂದು ಪುಣೆಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಅಕ್ಟೋಬರ್ 22ರಂದು ವೃದ್ಧ ಸೂರತ್‌ಗೆ ಪ್ರಯಾಣಿಸಿದ್ದರು. ನವೆಂಬರ್ 30ರಂದು ಈ ಝಿಕಾ ವೈರಸ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿಗಳಂತೆ ಬೆಕ್ಕುಗಳೂ ನಗರ ನಿವಾಸಿಗಳಿಗೆ ಕಂಟಕ: ಸಂತಾನಹರಣ ಚಿಕಿತ್ಸೆ ಆರಂಭಿಸಿದ ಪಾಲಿಕೆ