ETV Bharat / bharat

ಪೊಲೀಸರ ಮೇಲೆ ಹಲ್ಲೆ ಆರೋಪ ಪ್ರಕರಣ: ವೈಎಸ್​ ಶರ್ಮಿಳಾಗೆ ಷರತ್ತು ಬದ್ಧ ಜಾಮೀನು ಮಂಜೂರು

author img

By

Published : Apr 25, 2023, 3:52 PM IST

ವೈಎಸ್​ಆರ್​ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈಎಸ್​ ಶರ್ಮಿಳಾ ಅವರಿಗೆ ಹೈದರಾಬಾದ್​ನ ನಾಂಪಲ್ಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

YS Sharmila granted bail in cops 'assault' case

ಹೈದರಾಬಾದ್​ (ತೆಲಂಗಾಣ): ತೆಲಂಗಾಣ ಪೊಲೀಸರ ಮೇಲೆ ಹಲ್ಲೆ ಆರೋಪ ಪ್ರಕರಣದಲ್ಲಿ ಸೋಮವಾರ ಬಂಧಿತರಾಗಿದ್ದ ವೈಎಸ್​ಆರ್​ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈಎಸ್​ ಶರ್ಮಿಳಾ ಅವರಿಗೆ ಹೈದರಾಬಾದ್​ನ ನಾಂಪಲ್ಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 30 ಸಾವಿರ ರೂಪಾಯಿ ಸಮೇತ ಇಬ್ಬರ ಶ್ಯೂರಿಟಿ ಕೊಡಬೇಕು ಮತ್ತು ವಿದೇಶಕ್ಕೆ ತೆರಳಬೇಕಾದರೆ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ.

ತೆಲಂಗಾಣ ಲೋಕಸೇವಾ ಆಯೋಗ (ಟಿಎಸ್​ಪಿಎಸ್​ಸಿ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸೋಮವಾರ ವಿಶೇಷ ತನಿಖಾ ತಂಡ (ಎಸ್ಐಟಿ) ಕಚೇರಿಗೆ ಶರ್ಮಿಳಾ ತೆರಳಲು ನಿರ್ಧರಿಸಿದ್ದರು. ಈ ವೇಳೆ, ಪೊಲೀಸರು ಶರ್ಮಿಳಾ ಅವರನ್ನು ತಡೆದಿದ್ದರು. ಆಗ ಪೊಲೀಸರೊಂದಿಗೆ ವಾಗ್ವಾದ ಉಂಟಾಗಿತ್ತು. ಜೊತೆಗೆ ತಮ್ಮನ್ನು ತಡೆಯಲು ಯತ್ನಿಸಿದ ಎಸ್‌ಐ, ಮಹಿಳಾ ಪೇದೆ ಮೇಲೆ ಶರ್ಮಿಳಾ ಕೈ ಮಾಡಿದ್ದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು.

ಇದರ ಬೆನ್ನಲ್ಲೇ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಶರ್ಮಿಳಾ ವಿರುದ್ಧ ಪೊಲೀಸರು ಜುಬಿಲಿ ಹಿಲ್ಸ್ ಠಾಣೆಗೆ ಕರೆದೊಯ್ದಿದ್ದರು. ಅಲ್ಲದೇ, ಸೆಕ್ಷನ್ 353, 332, 509, 427 ಸೇರಿ ವಿವಿಧ ಸೆಕ್ಷನ್​ಗಳಡಿ ದಾಖಲಿಸಿ, ನಾಂಪಲ್ಲಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ, ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದರು. ಇದರಿಂದ ಶರ್ಮಿಳಾ ಅವರನ್ನು ಚಂಚಲಗುಡ ಜೈಲಿಗೆ ಶಿಫ್ಟ್​ ಮಾಡಲಾಗಿತ್ತು.

ಮತ್ತೊಂದೆಡೆ, ಶರ್ಮಿಳಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಇನ್ನೊಂದೆಡೆ, ಇಂದು ಬೆಳಗ್ಗೆ ಚಂಚಲಗೂಡ ಜೈಲಿನಲ್ಲಿರುವ ಶರ್ಮಿಳಾ ಅವರನ್ನು ಭೇಟಿ ಮಾಡಲು ತಾಯಿ ವೈ.ಎಸ್.ವಿಜಯಮ್ಮ ಅಲ್ಲಿಗೆ ಆಗಮಿಸಿದ್ದರು. ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​ ಶರ್ಮಿಳಾ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಆದರೆ, ನ್ಯಾಯಾಲಯದಲ್ಲಿ ಶರ್ಮಿಳಾ ಅವರಿಗೆ ಜಾಮೀನು ಸಿಗುವ ವಿಶ್ವಾಸ ಇದೆ. ಜಾಮೀನು ಸಿಕ್ಕ ನಂತರವೂ ಹೋರಾಟ ಮುಂದುವರಿಸುವುದಾಗಿ ಶರ್ಮಿಳಾ ಹೇಳಿದ್ದಾರೆ ಎಂದು ತಿಳಿಸಿದ್ದರು.

ನಡೆದಿದ್ದೇನು?: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಹೈದರಾಬಾದ್ ಪೊಲೀಸರ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಇದೇ ತಿಂಗಳ 26ರಂದು ಇಂದಿರಾ ಪಾರ್ಕ್​ನಲ್ಲಿ ಸತ್ಯಾಗ್ರಹ ನಡೆಸಲು ಶರ್ಮಿಳಾ ಅವರಿಗೆ ಹೈಕೋರ್ಟ್​ ಅನುಮತಿ ನೀಡಿತ್ತು. ಇದರ ನಡುವೆ ಸೋಮವಾರ ತಮ್ಮ ಬಳಿಯಿರುವ ಮಾಹಿತಿ ನೀಡಲು ಎಸ್‌ಐಟಿ ಕಚೇರಿಗೆ ತೆರಳುತ್ತಿರುವಾಗಿ ಶರ್ಮಿಳಾ ಹೇಳಿದ್ದರು.

ಆದರೆ, ಎಸ್‌ಐಟಿ ಕಚೇರಿಯಲ್ಲಿ ಶರ್ಮಿಳಾ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಪ್ರತಿಭಟನೆಗೆ ಅನುಮತಿ ಇಲ್ಲದ ಕಾರಣ ಪೊಲೀಸ್ ಸಿಬ್ಬಂದಿ ಅವರನ್ನು ಮನೆಯ ಬಳಿಯೇ ತಡೆಯಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು. ಇದೇ ಸಂದರ್ಭದಲ್ಲಿ ಪೊಲೀಸರೊಂದಿಗೆ ವಾಗ್ವಾದ ಉಂಟಾಗಿತ್ತು.

ಇದನ್ನೂ ಓದಿ: TSPSC ಪೇಪರ್ ಸೋರಿಕೆ ಪ್ರಕರಣ; ಮಹಿಳಾ ಕಾನ್ಸ್​​ಟೇಬಲ್​ಗೆ ಕಪಾಳಮೋಕ್ಷ, ವೈಎಸ್ ಶರ್ಮಿಳಾ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.