ನವ ದೆಹಲಿ: ಸ್ಟ್ರೀಮಿಂಗ್ ಮತ್ತು ವಿಡಿಯೋಗಳಿಗೆ ಕಮೆಂಟ್ ಮಾಡುವಾಗ ತಮ್ಮ ಕಮೆಂಟ್‌ಗಳಲ್ಲಿ ಕಸ್ಟಮ್ ಮೇಡ್ ಸ್ಟಿಕ್ಕರ್ಸ್ ಮತ್ತು ಎಮೋಟ್ಸ್ಗಳನ್ನು ಸೇರಿಸಲು ಅನುಕೂಲವಾಗುವಂತೆ ಹೊಸ ಫೀಚರ್ ಒಂದನ್ನು ಯೂಟ್ಯೂಬ್ ಪರಿಚಯಿಸಿದೆ.
ಟ್ವಿಟರ್ನ ಲೈವ್ ಸ್ಟ್ರೀಮ್‌ನಲ್ಲಿ ಟ್ವಿವ್ ಫೀಚರ್‌ನಲ್ಲಿ ಸ್ಟ್ರೀಮರ್ಗಳು ತಾವೇ ಸ್ವತಃ ಕಸ್ಟಮ್ ಕ್ರಿಯೇಟೆಡ್ ಇಮೋಜಿಗಳನ್ನು ಹರಿಬಿಡುವ ಮಾದರಿಯಲ್ಲೇ ಯೂಟ್ಯೂಬ್ ಫೀಚರ್ ಇದೆ. ಆದರೆ ಯೂಟ್ಯೂಬ್ನಲ್ಲಿ ಈ ಫೀಚರ್ ಸೈಟ್ ವೈಡ್ ಆಗಿ ಲಭ್ಯವಿದೆ. ಇದಕ್ಕೂ ಮುನ್ನ ಬಳಕೆದಾರರು ಕಮೆಂಟ್ ವಿಭಾಗದಲ್ಲಿ ಟೆಕ್ಸ್ಟ್ ಅಥವಾ ಎಮೋಜಿಗಳನ್ನು ಮಾತ್ರ ಬರೆಯಬಹುದಾಗಿತ್ತು. ಹೊಸ ಆಡ್ - ಆನ್ ಫೀಚರ್ನಿಂದ ವೀಕ್ಷಕರು ತಮ್ಮ ನೆಚ್ಚಿನ ವೀಡಿಯೊ ಅಥವಾ ಸ್ಟ್ರೀಮ್‌ನಲ್ಲಿ ನೀಡಲು ಬಯಸುವ ಪ್ರತಿಕ್ರಿಯೆಯನ್ನು ನೀಡಲು ಆಯ್ಕೆಗಳು ಸಿಗಲಿವೆ.
ಆದಾಗ್ಯೂ, ಬಳಕೆದಾರರು ಮೊಬೈಲ್ ಸಾಧನಗಳಲ್ಲಿ ಹೊಸ ಆಡ್-ಆನ್ ವೈಶಿಷ್ಟ್ಯವನ್ನು ಬಳಸಲಾಗುವುದಿಲ್ಲ. YouTube ವೆಬ್ನಲ್ಲಿ ಎಮೋಟ್ಸ್ಗಳ ದೊಡ್ಡ ಲೈಬ್ರರಿಯನ್ನು ಪಡೆಯಬಹುದು. ಚಾಟ್‌ಗಾಗಿ ಸುಮಾರು 60 ಎಮೋಟ್‌ಗಳು ಲಭ್ಯವಿವೆ.
ಬಳಸುವುದು ಹೇಗೆ?: ಹೊಸ ಯೂಟ್ಯೂಬ್ ಎಮೋಟ್‌ಗಳನ್ನು ಬಳಸಲು, ನೀವು ಲೈವ್ ಚಾಟ್ ಅಥವಾ ಕಮೆಂಟ್‌ಗಳ ವಿಭಾಗದಲ್ಲಿ ಲಿಟ್ಲ್ ಸ್ಮೈಲಿ ಚಿತ್ರವನ್ನು ಕ್ಲಿಕ್ ಮಾಡಬೇಕು. ಲೈವ್ ಸ್ಟ್ರೀಮ್‌ನಲ್ಲಿ, ಆ ಐಕಾನ್ ಎಡಭಾಗದಲ್ಲಿ ಕಂಡುಬರುತ್ತದೆ, ಆದರೆ ಪೂರ್ವ ರೆಕಾರ್ಡ್ ಮಾಡಿದ ವೀಡಿಯೊಗಳಲ್ಲಿನ ಕಮೆಂಟ್‌ಗಳಲ್ಲಿ ಎಮೋಜಿ ವಿಭಾಗವನ್ನು ಬಲಭಾಗದಲ್ಲಿರುತ್ತದೆ.
ಇದನ್ನೂ ಓದಿ: ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಮಾಡಿಕೊಂಡ ಅಪ್ರಾಪ್ತೆ