ETV Bharat / bharat

ದೆಹಲಿಯ ರಸ್ತೆಯಲ್ಲಿ ವಿದ್ಯಾರ್ಥಿಯ ಅಟ್ಟಾಡಿಸಿ ಬರ್ಬರ ಹತ್ಯೆ: ಸಿಸಿಟಿವಿ ವಿಡಿಯೋ - ಈಟಿವಿ ಭಾರತ ಕರ್ನಾಟಕ

ನಡುರಸ್ತೆಯಲ್ಲೇ ಯುವಕನೋರ್ವನ ಮೇಲೆ ಚಾಕುವಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆಗೈದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

murder case in delhi
murder case in delhi
author img

By

Published : Aug 12, 2022, 4:46 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡುರಸ್ತೆಯಲ್ಲೇ ಭೀಕರ ಕೊಲೆ ನಡೆದಿದೆ. ವಿದ್ಯಾರ್ಥಿಯೋರ್ವನನ್ನು ದುಷ್ಕರ್ಮಿಗಳ ಗುಂಪು ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೋಟೆಲ್​ ಮ್ಯಾನೇಜ್​​ಮೆಂಟ್​ ವಿದ್ಯಾರ್ಥಿಯ ಕೊಲೆಯಾಗಿದ್ದು, ದಕ್ಷಿಣ ದೆಹಲಿಯ ಮಾಳವೀಯಾ ನಗರದ ಮಾರುಕಟ್ಟೆಯಲ್ಲಿ ಘಟನೆ ನಡೆಯಿತು. 25 ವರ್ಷದ ಮಯಾಂಕ್​ ತನ್ನ ಸ್ನೇಹಿತರೊಂದಿಗೆ ಮಾರುಕಟ್ಟೆಯಲ್ಲಿ ನಿಂತಿದ್ದಾಗ ನಾಲ್ಕೈದು ಜನರು ಆತನ ಮೇಲೆ ದಾಳಿ ಮಾಡಿದ್ದಾರೆ.

ದೆಹಲಿ ನಡುರಸ್ತೆಯಲ್ಲೇ ನಡೀತು ಭೀಕರ ಕೊಲೆ

ದುಷ್ಕರ್ಮಿಗಳು ಮಯಾಂಕ್ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿದ್ದಂತೆ ಆತ ರಸ್ತೆಯುದ್ದಕ್ಕೂ ಓಡಾಡಿದ್ದಾನೆ. ಜನನಿಬಿಡ ಪ್ರದೇಶದಲ್ಲೇ ಘಟನೆ ನಡೆದಿದ್ದು, ಅಲ್ಲಿದ್ದವರು ಯಾರೂ ಕೂಡಾ ತಡೆಯುವ ಪ್ರಯತ್ನ ಮಾಡಿಲ್ಲ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಯುವಕನನ್ನು ಆತನ ಸ್ನೇಹಿತರು ತಕ್ಷಣವೇ ಏಮ್ಸ್​​ಗೆ ದಾಖಲಿಸಿದ್ದಾರೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಹತ್ಯೆಗೀಡಾಗ ಯುವಕವ​​ ಚಿಕ್ಕಪ್ಪ ಪ್ರದೀಪ್ ಮಾತನಾಡಿ, "ಗುರುವಾರ ಮಧ್ಯಾಹ್ನ 2 ಗಂಟೆಗೆ ಆತ ಮನೆಯಿಂದ ಹೊರಗಡೆ ಹೋಗಿದ್ದ. ಏನಾಯಿತೋ ಗೊತ್ತಿಲ್ಲ. ರಾತ್ರಿ ಆತನನ್ನು ಆಸ್ಪತ್ರೆಗೆ ದಾಖಲಿಸಿರುವ ವಿಚಾರ ಮಾತ್ರ ನಮಗೆ ಗೊತ್ತಾಗಿದೆ" ಎಂದರು.

ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ಕೊಲೆ ಪ್ರಕರಣ ಹೆಚ್ಚುತ್ತಿವೆ. ಅಪರಾಧಿಗಳು ಯಾವುದೇ ಭಯವಿಲ್ಲದೇ ಅಮಾಯಕರ ಪ್ರಾಣ ತೆಗೆಯುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಕೋವಿಡ್‌ ಉಲ್ಬಣ: ಮಾರ್ಗಸೂಚಿ ಪಾಲಿಸುವಂತೆ ಕೇಂದ್ರ ಸರ್ಕಾರ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.