ETV Bharat / bharat

ದೇವರನಾಡಲ್ಲಿ ಅಮಾನವೀಯತೆ : ಬೈಕ್ ಕಳವು ಶಂಕೆಯಲ್ಲಿ ಯುವಕನ ಕೊಂದ ಜನರ ಗುಂಪು - ಕೇರಳದಲ್ಲಿ ಬೈಕ್ ಕಳವು ಆರೋಪದಲ್ಲಿ ಯುವಕನ ಹತ್ಯೆ

ಹಿಂಸಾಚಾರದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಸಿಸಿಟಿವಿ ದೃಶ್ಯ ಪರಿಶೀಲಿಸುತ್ತಿದ್ದಾರೆ. ರಫೀಕ್ ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ..

Youth lynched in Palakkad over suspicion of bike theft
ಬೈಕ್ ಕದ್ದ ಶಂಕೆ: ಕೇರಳದಲ್ಲಿ ಯುವಕನ ಹೊಡೆದು ಕೊಂದ ಜನರ ಗುಂಪು
author img

By

Published : Apr 8, 2022, 12:03 PM IST

ಪಾಲಕ್ಕಾಡ್, ಕೇರಳ : ಬೈಕ್ ಕಳ್ಳತನ ಮಾಡಿದ ಆರೋಪದಲ್ಲಿ ಯುವಕನೊಬ್ಬನನ್ನು ಗುಂಪೊಂದು ಹೊಡೆದು ಕೊಂದಿರುವ ಘಟನೆ ಕೇರಳದ ಪಾಲಕ್ಕಾಡ್​​ನಲ್ಲಿ ನಡೆದಿದೆ. ಮಲಂಪುಳ ಕಡುಕ್ಕಂಕುನ್ನಂ ಮೂಲದ 27 ವರ್ಷದ ರಫೀಕ್ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಒಲವಕ್ಕೋಡ್ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಒಲವಕ್ಕೋಡ್​ನ ಬಾರ್​ನ ಮುಂದೆ ನಿಲ್ಲಿಸಿದ್ದ ಬೈಕ್ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಯುವಕನೊಬ್ಬ ಬೈಕ್ ಕದ್ದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ವಿಚಾರಿಸುವು ವೇಳೆ, ಗುಂಪೊಂದು ಗಲಾಟೆ ನಡೆಸಿದೆ. ಈ ವೇಳೆ ಗಲಾಟೆ ಹಿಂಸಾಚಾರಕ್ಕೆ ತಲುಪಿದ್ದು, ರಫೀಕ್​ನನ್ನು ಆ ಜನರ ಗುಂಪು ಹೊಡೆದು ಕೊಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿಂಸಾಚಾರದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಸಿಸಿಟಿವಿ ದೃಶ್ಯ ಪರಿಶೀಲಿಸುತ್ತಿದ್ದಾರೆ. ರಫೀಕ್ ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.

ಇದನ್ನೂ ಓದಿ:ಕಾರಾಗೃಹದ ಕಿಟಕಿಗೆ ನೇಣು ಬಿಗಿದುಕೊಂಡು ವಿಚಾರಣಾಧೀನ ಕೈದಿ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.