ETV Bharat / bharat

ರೈಲಿನಲ್ಲಿಯೇ ಕೊನೆಯುಸಿರೆಳೆದ ಯುವಕ: ಮೃತದೇಹದೊಂದಿಗೆ 280 ಕಿಮೀ ಕ್ರಮಿಸಿದ ಪ್ರಯಾಣಿಕರು

ಹೌರಾದಿಂದ ಕಾಠಗೋದಾಮ್​​​ಗೆ ಪ್ರಯಾಣಿಸುತ್ತಿದ್ದ ಬಾಗ್ ಎಕ್ಸ್‌ಪ್ರೆಸ್ ರೈಲಿ​ನಲ್ಲಿ ಯುವಕನೊಬ್ಬ ಅನಾರೋಗ್ಯದಿಂದ ಮೃತಪಟ್ಟರುವ ಘಟನೆ ನಡೆದಿದೆ.

youth-dies-in-howrah-kathgodam-train-muzaffarpur-bihar
ರೈಲಿನಲ್ಲಿಯೇ ಕೊನೆಯುಸಿರೆಳೆದ ಯುವಕ: ಮೃತದೇಹದೊಂದಿಗೆ 280 ಕಿಮೀ ಕ್ರಮಿಸಿದ ಪ್ರಯಾಣಿಕರು
author img

By ETV Bharat Karnataka Team

Published : Nov 17, 2023, 6:49 PM IST

ಮುಜಾಫರ್‌ಪುರ(ಬಿಹಾರ): ಯುವಕನೊಬ್ಬ ಅನಾರೋಗ್ಯದಿಂದ ರೈಲಿನಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಹೌರಾದಿಂದ ಕಾಠಗೋದಾಮ್​​ಗೆ ಪ್ರಯಾಣಿಸುತ್ತಿದ್ದ 13019 ಸಂಖ್ಯೆಯ ಬಾಗ್ ಎಕ್ಸ್‌ಪ್ರೆಸ್​ನಲ್ಲಿ ಈ ಘಟನೆ ಸಂಭವಿಸಿದೆ. ಮೃತ ಯುವಕನನ್ನು ಬಿಹಾರದ ಸರನ್ ಜಿಲ್ಲೆಯ ಜೈತ್‌ಪುರ ಗ್ರಾಮದ ನಿವಾಸಿ ದಿನೇಶ್ ಮಹತೋ (35) ಎಂದು ಗುರುತಿಸಲಾಗಿದೆ. ರೈಲಿನ ಮೂಲಕ ಮೃತದೇಹ ಮುಜಾಫರ್‌ಪುರ ತಲುಪಿದ ನಂತರ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.

ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ: ಮಾಹಿತಿ ಪ್ರಕಾರ, ಯುವಕ ಪಶ್ಚಿಮಬಂಗಾಳದ ದುರ್ಗಾಪುರದ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಛತ್ ಹಬ್ಬದ ನಿಮಿತ್ತ ರಜೆ ಪಡೆದು ಮನೆಗೆ ತೆರಳುತ್ತಿದ್ದ. ದುರ್ಗಾಪುರದಲ್ಲಿ ಹೌರಾದಿಂದ ಕಾಠಗೋದಾಮ್​ಗೆ ಹೋಗುವ 13019 ಸಂಖ್ಯೆಯ ಬಾಗ್ ಎಕ್ಸ್‌ಪ್ರೆಸ್‌ನ ಸಾಮಾನ್ಯ ಬೋಗಿಯಲ್ಲಿ ಹತ್ತಿದ್ದ. ಯುವಕ ಸರನ್ ಜಿಲ್ಲೆಯ ಎಕ್ಮಾ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು, ಆದರೆ ದುರಾದೃಷ್ಟವಶಾತ್​ ಯುವಕ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

ಸಮಯಕ್ಕೆ ಸರಿಯಾಗಿ ಸಿಗದ ವೈದ್ಯರ ಚಿಕಿತ್ಸೆ: ಯುವಕನ ಜತೆಗೆ ದಿಗ್ವಾರ ಗ್ರಾಮದ ಕೌಶಲ್ ಕಿಶೋರ್ ಎಂಬುವವರು ಕೂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮಂಗಳವಾರ ರಾತ್ರಿ ದುರ್ಗಾಪುರದಲ್ಲಿ ಎಲ್ಲರೂ ಸಾಮಾನ್ಯ ಬೋಗಿಯ ಟಿಕೆಟ್‌ಗಳನ್ನು ತೆಗೆದುಕೊಂಡು ರೈಲು ಹತ್ತಿದ್ದರು. ಜನರಲ್ ಬೋಗಿಯಲ್ಲಿ ಸಾಕಷ್ಟು ಜನಸಂದಣಿ ಇತ್ತು. ಅಸನ್ಸೋಲ್ ಬರುತ್ತಿದ್ದಂತೆ ಯುವಕ ಅನಾರೋಗ್ಯಕ್ಕೆ ಒಳಗಾದಾಗ ಕೇವಲ ಎರಡು ನಿಲ್ದಾಣಗಳನ್ನು ಮಾತ್ರ ದಾಟಿದ್ದರು. ಯುವಕ ತೀವ್ರವಾಗಿ ನಡುಗಲು ಪ್ರಾರಂಭಿಸಿದ್ದ, ಈ ಕುರಿತು ರೈಲಿನ ಟಿಟಿಇಗೆ ಮಾಹಿತಿ ನೀಡಲಾಗಿದೆ ಎಂದು ಆತನ ಸ್ನೇಹಿತ ಹೇಳಿದ್ದಾರೆ. ಆದರೆ ಯುವಕನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಯಾವ ವೈದ್ಯರು ಬರಲಿಲ್ಲ ಎಂದು ಅವರು ತಿಳಿಸಿದ್ದಾರೆ.

25 ನಿಲ್ದಾಣಗಳವರೆಗೆ ಮೃತದೇಹದೊಂದಿಗೆ ಪ್ರಯಾಣಿಸಿದ ಸಹ ಪ್ರಯಾಣಿಕರು: ಜಾರ್ಖಂಡ್‌ನ ಮಧುಪುರ್ ನಿಲ್ದಾಣದ ಬಳಿ ಯುವಕ ಸಾವನ್ನಪ್ಪಿದ್ದ ಎಂದು ಅವನೊಂದಿಗೆ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಅಲ್ಲಿಂದ 25 ನಿಲ್ದಾಣಗಳು ಅಂದರೆ 280 ಕಿ.ಮೀ ಕ್ರಮಿಸಿ ರೈಲು ಮುಜಾಫರ್​ಪುರ ತಲುಪಿದ, ಬಳಿಕ ಯುವಕನ ಶವವನ್ನು ರೈಲಿನಿಂದ ಕೆಳಗಿಸಲಾಗಿದೆ. ಈ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ರೈಲ್ವೆ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಮುಜಫರ್‌ಪುರದ ರೈಲ್ವೆ ಪೊಲೀಸ್​ ಅಧಿಕಾರಿ ಧರ್ಮೇಂದ್ರ ಕುಮಾರ್ ಪ್ರತಿಕ್ರಿಯಿಸಿ, "ಹೌರಾ- ಕಾಠಗೋದಾಮ್​ ರೈಲಿನಲ್ಲಿ ಯುವಕ ಮೃತಪಟ್ಟ ಘಟನೆ ನಡೆದಿದೆ. ಯುವಕನ ಮೃತದೇಹವನ್ನು ರೈಲಿನಿಂದ ಕೆಳಗಿಳಿಸಲಾಗಿದೆ. ಈ ಕುರಿತು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಯುವಕನ ಸಂಬಂಧಿಕರ ಪ್ರಕಾರ, ಆರೋಗ್ಯ ಹದಗೆಟ್ಟಿದ್ದರಿಂದ ಈ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಯನ್ನು ಕುಟುಂಬ ಸದಸ್ಯರ ಅಪೇಕ್ಷೆಯಂತೆ ನಡೆಸಲಾಗುವುದು" ಎಂದರು.

ಇದನ್ನೂ ಓದಿ: 500 ಅಡಿ ಆಳದ ಕಂದಕಕ್ಕೆ ಉರುಳಿದ ಪಿಕಪ್​ ವಾಹನ: 8 ಜನರ ದಾರುಣ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.