ಸೋನಿಪತ್: ಹರಿಯಾಣದಲ್ಲಿ ದುರಂತ ಘಟನೆಯೊಂದು ನಡೆದಿದ್ದು, ಇದನ್ನು ಕೇಳಿದರೆ ಎಂಥವರಿಗೂ ದಂಗಾಗುತ್ತದೆ. ಸೋನಿಪತ್ ಬಳಿಯ ಜಟವಾಡಾ ಗ್ರಾಮದ ಮುಕೇಶ್ ಮತ್ತು ಆತನ ಗೆಳೆಯ ಮನು ಕುಡಿದ ಮತ್ತಿನಲ್ಲಿ ಆಡಿದ ಸಾಯುವ ಆಟದಲ್ಲಿ ಮುಕೇಶ್ ಎಂಬಾತ ಪ್ರಾಣವನ್ನೇ ಬಿಟ್ಟಿದ್ದಾನೆ.
ಘಟನೆಯ ವಿವರ: ಜಟವಾಡಾ ಗ್ರಾಮದ ಮುಕೇಶ್ ಮತ್ತು ಮನು ಕುಳಿತು ಕಂಠಪೂರ್ತಿ ಕುಡಿದಿದ್ದರು. ಇಬ್ಬರೂ ಜಿಗರಿ ದೋಸ್ತುಗಳಾಗಿದ್ದರು. ಕುಡಿದ ನಂತರ ಮುಕೇಶ್ನ ತಂಗಿಯ ಮನೆಯಲ್ಲಿ ಊಟ ಮಾಡಿದ್ದಾರೆ. ಅಲ್ಲಿಂದ ಹೊರಟ ನಂತರ ಇಬ್ಬರೂ ನಶೆಯಲ್ಲಿ ಯಾರು ಮೊದಲು ಸಾಯುತ್ತಾರೆ ಎಂದು ಷರತ್ತು ಕಟ್ಟಿದ್ದಾರೆ.
ಇದನ್ನು ನೋಡಲು ಇಬ್ಬರೂ ಸೇರಿ ರೈಲ್ವೆ ಹಳಿಯ ಮೇಲೆ ಹೋಗಿ ನಿಂತಿದ್ದಾರೆ. ಈ ಸಮಯದಲ್ಲಿ ರೈಲು ಬಂದಿದೆ. ಆಗ ಮನು ಮುಕೇಶ್‌ನನ್ನು ರೈಲಿನ ಎದುರು ತಳ್ಳಿದ್ದಾನೆ ಎನ್ನಲಾಗಿದೆ. ಹೀಗಾಗಿ ಮುಕೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಘಟನೆ ನಂತರ ಮನು ಸ್ಥಳದಿಂದ ಓಡಿಹೋಗಿದ್ದ. ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯ ಮಾಹಿತಿ ಪಡೆದ ಸೋನಿಪತ್ ಜಿಆರ್‌ಪಿ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಸೋನಿಪತ್‌ನ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಆರ್‌ಪಿ ಠಾಣೆ ಪ್ರಭಾರಿ ಧರ್ಮಪಾಲ್, ಘಟನೆಯ ವೇಳೆ ಜಟವಾಡಾ ಗ್ರಾಮದ ನಿವಾಸಿಗಳಾದ ಕುಲದೀಪ್ ಮತ್ತು ದೀಪಕ್ ಸ್ಥಳದಲ್ಲಿದ್ದರು. ಮುಕೇಶ್ ಮತ್ತು ಮನು ಮದ್ಯ ಸೇವಿಸಿದ್ದರು ಎಂದು ಇಬ್ಬರೂ ನಮಗೆ ತಿಳಿಸಿದ್ದಾರೆ.
ಯಾರು ಮೊದಲು ಸಾಯುತ್ತಾರೆ ಎಂದು ಇಬ್ಬರೂ ಪಣತೊಟ್ಟಿದ್ದರು. ಆದರೆ, ಮನು ಮುಕೇಶ್‌ನನ್ನು ರೈಲಿನ ಮುಂದೆ ತಳ್ಳಿದನು. ಇದಾದ ಬಳಿಕ ಮುಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆ ಪ್ರಕರಣ (ಸೋನಿಪತ್‌ನಲ್ಲಿ ಕೊಲೆ) ದಾಖಲಿಸಿಕೊಂಡು ಪೊಲೀಸರು ಆರೋಪಿ ಮನುವನ್ನು ಬಂಧಿಸಿದ್ದಾರೆ.
ಇದನ್ನು ಓದಿ: 10 ದಿನದ ಹಿಂದೆ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ ಪತಿ ಅಂದರ್