ETV Bharat / bharat

ತಮಿಳುನಾಡು : ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಎದೆಗೆ ಹೋರಿ ತಿವಿತದಿಂದ ಯುವಕ ಸಾವು

author img

By

Published : Jan 24, 2022, 11:37 AM IST

ತಿರುಚ್ಚಿ ಜಿಲ್ಲೆಯ ಪಲ್ಲಪಟ್ಟಿ ಎಂಬಲ್ಲಿ ಜನವರಿ 22 ರಂದು ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 750 ಗೂಳಿಗಳು, 300 ಮಂದಿ ಹೋರಿ ಹಿಡಿಯುವವರು ಭಾಗವಹಿಸಿದ್ದರು. ಈ ವೇಳೆ ನಡೆದ ಸ್ಪರ್ಧೆಯಲ್ಲಿ ಯುವಕ ಸಸಿ ಗಿಲ್ಪಟ್​ ಹೋರಿ ಹಿಡಿಯುವ ವೇಳೆ ಎದೆಗೆ ಗೂಳಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ..

jallikattu
ಜಲ್ಲಿಕಟ್ಟು

ತಮಿಳುನಾಡು : ಪೊಂಗಲ್​ ಹಬ್ಬದ ಹಿನ್ನೆಲೆಯಲ್ಲಿ ನಡೆದ ಹೋರಿ ಬೆದರಿಸುವ (ಜಲ್ಲಿಕಟ್ಟು) ಸ್ಪರ್ಧೆಯಲ್ಲಿ ಯುವಕನೊಬ್ಬನ ಎದೆಗೆ ಹೋರಿ ತಿವಿತದಿಂದ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ನಡೆದಿದೆ.

ಸಸಿ ಗಿಲ್ಪಟ್​ ಮೃತ ಯುವಕ. ತಿರುಚ್ಚಿ ಜಿಲ್ಲೆಯ ಪಲ್ಲಪಟ್ಟಿ ಎಂಬಲ್ಲಿ ಜನವರಿ 22ರಂದು ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 750 ಗೂಳಿಗಳು, 300 ಮಂದಿ ಹೋರಿ ಹಿಡಿಯುವವರು ಭಾಗವಹಿಸಿದ್ದರು. ಈ ವೇಳೆ ನಡೆದ ಸ್ಪರ್ಧೆಯಲ್ಲಿ ಯುವಕ ಸಸಿ ಗಿಲ್ಪಟ್​ ಹೋರಿ ಹಿಡಿಯುವ ವೇಳೆ ಎದೆಗೆ ಗೂಳಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ.

ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡ ಪರಿಣಾಮ ಸಸಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ: ಉತ್ತರಪ್ರದೇಶದಲ್ಲಿ ಐಟಿ ದಾಳಿ, 3 ಕೋಟಿ ರೂ. ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.