ಹಲ್ದ್ವಾನಿ: ಸ್ಮಾರ್ಟ್ಫೋನ್ ಕಳೆದ ಬೇಸರದಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಗೌಲಾಪರ್ ಗ್ರಾಮದಲ್ಲಿ ನಡೆದಿದೆ.
ಖೇಡಾ ಗೌಲಾಪರ್ ನಿವಾಸಿ ಸೋಂಬೀರ್ (30) ಕುಟುಂಬ ಗೌಲಾಪರ್‌ನ ಬಾಟೈನಲ್ಲಿ ಕೃಷಿ ಕೆಲಸ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಸೋಂಬೀರ್ ತನ್ನ ಸ್ಮಾರ್ಟ್ಫೋನ್ ಕಳೆದುಕೊಂಡಿದ್ದಾರೆ. ಮೊಬೈಲ್ ಕಳೆದುಕೊಂಡಿದ್ದಕ್ಕೆ ಸೋಂಬೀರ್ ತೀವ್ರ ಆಘಾತಕ್ಕೊಳಗಾಗಿದ್ದರು. ಇದರಿಂದ ವಿಪರೀತ ಬೇಸರವಾಗಿದ್ದ ಸೋಂಬೀರ್ ವಿಷ ಸೇವಿಸಿದ್ದನು.
ವಿಷ ಸೇವಿಸಿದ್ದ ಸೋಂಬೀರ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಸೋಂಬೀರ್ ಸಾವನ್ನಪ್ಪಿದ್ದರು. ಮಗನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.