ETV Bharat / bharat

Lover Revenge: ಲವ್ ಪ್ರಪೋಸ್ ನಿರಾಕರಿಸಿದ ಯುವತಿ ಕೈಗೆ ಗಾಂಜಾ ಗಿಫ್ಟ್​​.. ಮುಂದೆ ನಡೆದದ್ದು ಇಂಟ್ರೆಸ್ಟಿಂಗ್​ - ಯುವತಿ ಕೈಗೆ ಗಾಂಜಾ ಗಿಫ್ಟ್

ತನ್ನ ಪ್ರೀತಿಯನ್ನ ನಿರಾಕರಣೆ ಮಾಡಿದ್ದಾಳೆಂಬ ಕಾರಣಕ್ಕಾಗಿ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ವ್ಯಕ್ತಿಯೊಬ್ಬ ಪೊಲೀಸ್​ ಅತಿಥಿಯಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Lover Revenge
Lover Revenge
author img

By

Published : Oct 22, 2021, 5:38 PM IST

Updated : Oct 22, 2021, 6:01 PM IST

ವಿಶಾಖಪಟ್ಟಣಂ(ಆಂಧ್ರಪ್ರದೇಶ): ಯುವತಿ ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕರು ಆತ್ಮಹತ್ಯೆ ಮಾಡಿಕೊಳ್ಳುವುದು, ಹುಡುಗಿಯರ ಮೇಲೆ ಹಲ್ಲೆ ನಡೆಸುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ಯುವಕ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಲವ್​​ ಪ್ರಪೋಸ್​ ನಿರಾಕರಣೆ ಮಾಡಿದ ಯುವತಿ ಕೈಯಲ್ಲಿ ಗಾಂಜಾ ಗಿಫ್ಟ್​​ ಆಗಿ ನೀಡಿ, ಕೊನೆಗೆ ತಾನೇ ಪೊಲೀಸರ ಅತಿಥಿಯಾಗಿದ್ದಾನೆ. ಇಷ್ಟಕ್ಕೂ ಘಟನೆ ಹೇಗೆ ನಡೆಯಿತು ಎಂಬ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ಈ ಘಟನೆ ನಡೆದಿದೆ. 25 ವರ್ಷದ ವಿನಯ್​ ಕುಮಾರ್ ಖಾಸಗಿ ಕಂಪನಿಯಲ್ಲಿ ಡೇಟಾ ಎಂಟ್ರಿ ಕೆಲಸ ಮಾಡ್ತಿದ್ದನು. ಆತ ತನ್ನೊಂದಿಗೆ ವ್ಯಾಸಂಗ ಮಾಡಿದ್ದ ಹುಡುಗಿಯನ್ನ ಪ್ರೀತಿಸುತ್ತಿದ್ದನು. ಆಕೆಯ ಮುಂದೆ ತನ್ನ ಪ್ರೇಮ ನಿವೇದನೆ ಸಹ ಮಾಡಿಕೊಂಡಿದ್ದಾನೆ. ಈ ವೇಳೆ ಯುವತಿ ಪ್ರೇಮ ಪ್ರಸ್ತಾಪ ತಿರಸ್ಕಾರ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡಿರುವ ವಿನಯ್​ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ.

ಯುವಕ ಮಾಡಿದ್ದೇನು ನೋಡಿ!?

ಪ್ರೀತಿ ನಿರಾಕರಣೆ ಮಾಡಿದ್ದ ಯುವತಿ ತನ್ನ ಸ್ನೇಹಿತೆಯರ ಜೊತೆ ಸೇರಿ ಕಳೆದ ಮೇ ತಿಂಗಳಲ್ಲಿ ಶಿರಡಿ ಸಾಯಿ ಎಕ್ಸ್​​ಪ್ರೆಸ್​ ರೈಲಿನಲ್ಲಿ ಸಿಕಂದರಾಬಾದ್​ಗೆ ತೆರಳುತ್ತಿದ್ದಳು. ಈ ಮಾಹಿತಿ ಗೊತ್ತಾಗುತ್ತಿದ್ದಂತೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿರುವ ವಿನಯ್​, ಸ್ನೇಹದ ಸಂಕೇತವಾಗಿ ಉಡುಗೊರೆವೊಂದನ್ನ ನೀಡಿದ್ದಾನೆ. ಆತನ ಮೇಲಿನ ನಂಬಿಕೆಯಿಂದಾಗಿ ಉಡುಗೊರೆ ತೆಗೆದುಕೊಂಡಿದ್ದಾಳೆ. ಆದರೆ, ಅದರಲ್ಲಿ 3 ಕೆಜಿ ಗಾಂಜಾ ಇದೆ ಎಂಬುದು ಮಾತ್ರ ಅವಳಿಗೆ ಗೊತ್ತಾಗಿರಲಿಲ್ಲ.

ಇದನ್ನೂ ಓದಿರಿ: IPLನಲ್ಲಿ ಹೊಸ ತಂಡ ಖರೀದಿಗೆ ದಿಢೀರ್​ ಆಗಿ ಕೇಳಿ ಬಂತು ರಣವೀರ್ ​- ದೀಪಿಕಾ ಹೆಸರು

ರೈಲು ಹೊರಡುತ್ತಿದ್ದಂತೆ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿರುವ ವಿನಯ್​​, ಗಾಂಜಾ ಸಾಗಾಣೆ ಮಾಡುತ್ತಿರುವ ಹುಡುಗಿ ಅದರಲ್ಲಿ ಪ್ರಯಾಣ ಬೆಳೆಸಿದ್ದಾಳೆ ಎಂದು ತಿಳಿಸಿದ್ದಾನೆ. ರೈಲು ಸಿಕಂದರಾಬಾದ್​ ತಲುಪುತ್ತಿದ್ದಂತೆ ರೈಲ್ವೇ ಪೊಲೀಸರು ಆ ಹುಡುಗಿಯನ್ನ ಹಿಡಿದು ತಪಾಸಣೆ ನಡೆಸಿದಾಗ 3 ಕೆಜಿ ಗಾಂಜಾ ಬಾಕ್ಸ್​ ಸಿಕ್ಕಿದೆ. ಈ ವೇಳೆ ಪೊಲೀಸರು ಪ್ರಶ್ನೆ ಮಾಡಿದಾಗ ನಡೆದ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾಳೆ.

ಘಟನೆ ನಡೆಯುತ್ತಿದ್ದಂತೆ ಪೊಲೀಸರು ವಿನಯ್​ಗೋಸ್ಕರ ಶೋಧಕಾರ್ಯ ಆರಂಭ ಮಾಡಿದ್ದಾರೆ. ಆದರೆ, ಆತ ತಲೆಮರೆಸಿಕೊಂಡಿದ್ದನು. ಆತನ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಪೊಲೀಸರು, ನಿನ್ನ ವಿರುದ್ಧ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ. ಘಟನೆ ಬಗ್ಗೆ ಮಾತನಾಡಲು ಮಾತ್ರ ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಈ ವೇಳೆ, ಅಲ್ಲಿಗೆ ಬಂದಿರುವ ಆತನ ವಿಚಾರಣೆ ನಡೆಸಿದ ವೇಳೆ ಗಾಂಜಾ ಉಡುಗೊರೆಯಾಗಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದರ ಬೆನ್ನಲ್ಲೇ ಆತನ ಬಂಧನ ಮಾಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ನಿರಾಪರಾಧಿ ಯುವತಿಯನ್ನ ಬಿಟ್ಟು ಕಳುಹಿಸಿಕೊಟ್ಟಿದ್ದಾರೆ.

Last Updated : Oct 22, 2021, 6:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.