ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಇದೀಗ 28 ವರ್ಷದ ದಲಿತ ಯುವತಿ ಪ್ರಿಯಾ ಎಂಬವರನ್ನು ಚೆನ್ನೈ ಕಾರ್ಪೋರೇಷನ್ಗೆ ಮೇಯರ್ ಆಗಿ ಆಯ್ಕೆ ಮಾಡಿದೆ.
ಇದನ್ನೂ ಓದಿ: ಇವರು IPS ಅವಳಿ ಸಹೋದರರು! ಸಾಧಕರ ಅಪರೂಪದ ಫೋಟೋಗೆ ಮೆಚ್ಚುಗೆ
ಚೆನ್ನೈನ ಉತ್ತರ ಭಾಗದಲ್ಲಿರುವ ತಿರುವಿಕಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಿಯಾ ಗೆದ್ದಿದ್ದಾರೆ. ಈ ಬೆನ್ನಲ್ಲೇ ಡಿಎಂಕೆ ಇವರ ಹೆಸರನ್ನು ಚೆನ್ನೈ ಮೇಯರ್ ಪಟ್ಟಕ್ಕೆ ನಾಮನಿರ್ದೇಶನ ಮಾಡಿತು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಡಿಎಂಕೆ ಪಕ್ಷ ನಗರ ಪಾಲಿಕೆಯಲ್ಲಿ 952, ಪುರಸಭೆಗಳಲ್ಲಿ 2,360 ಮತ್ತು ಪಟ್ಟಣ ಪಂಚಾಯಿತಿಯಲ್ಲಿ 4,389 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ.